ಮಧ್ಯರಾತ್ರಿ ಬೆಂಗಳೂರು ಪೊಲೀಸರ ಡೆಡ್ಲಿ ಚೇಸಿಂಗ್, ಸಿನಿಮೀಯ ಶೈಲಿಯಲ್ಲಿ ಕಿಡ್ನ್ಯಾಪರ್ಸ್‌ ಬಂಧನ

ಮಧ್ಯರಾತ್ರಿ ಬೆಂಗಳೂರು ಪೊಲೀಸರು ಡೆಡ್ಲಿ ಚೇಸಿಂಗ್ ಮಾಡಿದ್ದು, ಆಡುಗೋಡಿ ಇನ್ಸ್‌ಪೆಕ್ಟರ್‌ ಮಂಜುನಾಥ್‌ ಸಮಯ ಪ್ರಜ್ಞೆಯಿಂದಾಗಿ ಜೀವ ಉಳಿದಿದೆ.

Share this Video
  • FB
  • Linkdin
  • Whatsapp

ಬೆಂಗಳೂರು ಪೊಲೀಸರು ಸಿನಿಮೀಯ ರೀತಿಯಲ್ಲಿ ಚೇಸ್‌ ಮಾಡಿ ಕಿಡ್ನ್ಯಾಪ್ ಆರೋಪಿಯನ್ನು ಬಂಧಿಸಿರುವ ಘಟನೆ ಬುಧವಾರ ಮಧ್ಯರಾತ್ರಿ ನಡೆದಿದೆ. ಆರೋಪಿಯನ್ನು ಹಿಡಿದ ಲೈವ್‌ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಧ್ಯರಾತ್ರಿ ಬೆಂಗಳೂರು ಪೊಲೀಸರು ಡೆಡ್ಲಿ ಚೇಸಿಂಗ್ ಮಾಡಿದ್ದು, ಆಡುಗೋಡಿ ಇನ್ಸ್‌ಪೆಕ್ಟರ್‌ ಮಂಜುನಾಥ್‌ ಸಮಯ ಪ್ರಜ್ಞೆಯಿಂದಾಗಿ ಜೀವ ಉಳಿದಿದೆ. ಹಣ ಕೊಟ್ಟ ಮೇಲೂ ತೌಹಿದ್‌ನನ್ನು ಆರೋಪಿಗಳು ಬಿಡಲಿಲ್ಲ ಎಂದು ತಿಳಿದುಬಂದಿದ್ದು, ಈ ಹಿನ್ನೆಲೆ ಮಡಿವಾಳ ಪೊಲೀಸ್‌ ಠಾಣೆಗೆ ತಡರಾತ್ರಿ ದೂರು ನೀಡಲು ಕುಟುಂಬ ಆಗಮಿಸಿತ್ತು. ಆದರೆ, ಅಷ್ಟರಲ್ಲಾಗಲೇ ಆರೋಪಿಗಳನ್ನು ಚೇಸ್‌ ಮಾಡಿದ್ದ ಇನ್ಸೆಪೆಕ್ಟರ್‌ ಹಿಡಿದಿದ್ದರು ಎಂದು ತಿಳಿದುಬಂದಿದೆ. 

Related Video