ಬೆಳಗಾವಿಯಲ್ಲಿ ಹಾಡಹಗಲೇ ಟ್ಯೂಷನ್‌ಗೆ ಹೊರಟಿದ್ದ ಬಾಲಕಿಯ ಅಪಹರಣಕ್ಕೆ ಯತ್ನ: ಸಿಸಿಟಿವಿಯಲ್ಲಿ ಕೃತ್ಯ ಸೆರೆ

ಹೆಗಲ ಮೇಲೆ ಹೊತ್ತು ಹಾಡಹಗಲೇ ಟ್ಯೂಷನ್‌ಗೆ ಹೊರಟಿದ್ದ ಬಾಲಕಿಯ ಅಪಹರಣಕ್ಕೆ ಯತ್ನಿಸಿದ ಘಟನೆ ಬೆಳಗಾವಿಯ ಹಿಂದವಾಡಿ ಪೋಸ್ಟ್ ಆಫೀಸ್ ಬಳಿ ನಡೆದಿದೆ.

Share this Video
  • FB
  • Linkdin
  • Whatsapp

ಬೆಳಗಾವಿ (ಜು.12): ಹೆಗಲ ಮೇಲೆ ಹೊತ್ತು ಹಾಡಹಗಲೇ ಟ್ಯೂಷನ್‌ಗೆ ಹೊರಟಿದ್ದ ಬಾಲಕಿಯ ಅಪಹರಣಕ್ಕೆ ಯತ್ನಿಸಿದ ಘಟನೆ ಬೆಳಗಾವಿಯ ಹಿಂದವಾಡಿ ಪೋಸ್ಟ್ ಆಫೀಸ್ ಬಳಿ ನಡೆದಿದೆ. 9 ವರ್ಷದ ಬಾಲಕಿಯನ್ನು ಹೆಗಲ ಮೇಲೆ ಹೊತ್ತೋಯ್ಯುತ್ತಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗಡಿನಾಡಲ್ಲಿ ಮಕ್ಕಳ ಅಪಹರಣಕಾರರ ಗ್ಯಾಂಗ್ ಮತ್ತೆ ಸಕ್ರಿಯವಾಯಿತಾ ಎಂಬ ಅನುಮಾನ ಮೂಡಿದೆ. ಕೀಚಕನಿಂದ ಬಿಡಿಸಿಕೊಳ್ಳಲು ಬಾಲಕಿಯ ಹರಸಾಹಸಪಟ್ಟಿದ್ದು, ಆರೋಪಿ ಹೆಗಲ ಮೇಲೆಯೇ ಅಪಹರಣಕಾರನಿಗೆ ಒಂದೆರಡು ಏಟು ಹೊಡೆದು ಬಾಲಕಿ ಚೀರಾಟ ನಡೆಸಿದ್ದಾಳೆ. ಇನ್ನು ಬಾಲಕಿಯ ಚಿರಾಟ ಕೇಳಿ ಗುಂಪಾದ ಜನತೆ ಹಾಗೂ ಸ್ಥಳೀಯ ‌ನಿವಾಸಿಗಳು ಆರೋಪಿಯ ಬೆನ್ನೆತ್ತಿದ್ದಾಗ ಬಾಲಕಿಯನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿ ಆಸಾಮಿ ಸ್ಥಳೀಯರಿಂದ ತಪ್ಪಿಸಿಕೊಂಡಿದ್ದಾನೆ. 

ಬಾಲಕಿಯ ಪೋಷಕರಿಂದ ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಳಗಾವಿ ನಗರದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದಕ್ಕೆ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಈ ಪ್ರಕರಣವನ್ನು ಬೆಳಗಾವಿ ‌ನಗರ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಉದ್ಯಮಭಾಗ ಠಾಣೆಯ ಪಿಐ ರಾಮಣ್ಣ ಬಿರಾದರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದಾರೆ. ಬಾಲಕಿಯ ಅಪಹರಣಕ್ಕೆ ಯತ್ನಿಸಿದ ಆರೋಪಿಗೆ ತೀವ್ರ ಶೋಧ ಕಾರ್ಯ ಆರಂಭಿಸಿದ್ದು, ಅಪಹರಣಕ್ಕೆ ಯತ್ನಿಸಿದ ಆರೋಪಿ ಪಶ್ಚಿಮ ‌ಬಂಗಾಲ ಮೂಲದವನು ಎಂಬ ಮಾಹಿತಿ ಸಿಕ್ಕಿದೆ. ಸದ್ಯ ಗೋವಾ ಹಾಗೂ ಮಹಾರಾಷ್ಟ್ರದತ್ತ ಆರೋಪಿ ಪ್ರಯಾಣ ಬೆಳೆಸಿರುವ ಶಂಕೆ ವ್ಯಕ್ತವಾಗಿದೆ. 

Related Video