Asianet Suvarna News Asianet Suvarna News

ರಾಜಕೀಯ ನಾಯಕನ ಹೆಂಡತಿಗೆ ಇಬ್ಬಿಬ್ಬರು ಬಾಯ್ ಫ್ರೆಂಡ್ಸ್‌; ಅನೈತಿಕ ಸಂಬಂಧಕ್ಕಾಗಿ ಗಂಡನನ್ನೇ ಕೊಂದುಬಿಟ್ಟಳು!

ಕರ್ನಾಟಕ ರಾಜಕೀಯ ನಾಯಕನ ಹೆಂಡತಿಗಿತ್ತು ಎರೆಡೆರಡು ಕಡೆಗೆ ಅನೈತಿಕ ಸಂಬಂಧ. ಹಾದರಕ್ಕೆ ಗಂಡ ಅಡ್ಡಿಯಾಗುತ್ತಾನೆಂದು ಗಂಡನಿಗೆ ವಿಷ ಹಾಕಿ ಕೊಂದೇಬಿಟ್ಟಳು ಕಿರಾತಕಿ ಹೆಂಡತಿ...

First Published Mar 31, 2024, 1:05 PM IST | Last Updated Mar 31, 2024, 1:05 PM IST

ಕರ್ನಾಟಕ ರಾಜಕೀಯ ನಾಯಕನ ಹೆಂಡತಿಗಿತ್ತು ಎರೆಡೆರಡು ಕಡೆಗೆ ಅನೈತಿಕ ಸಂಬಂಧ. ಹಾದರಕ್ಕೆ ಗಂಡ ಅಡ್ಡಿಯಾಗುತ್ತಾನೆಂದು ಗಂಡನಿಗೆ ವಿಷ ಹಾಕಿ ಕೊಂದೇಬಿಟ್ಟಳು ಕಿರಾತಕಿ ಹೆಂಡತಿ... ಈಗ ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಅಪ್ಪನೂ ಇಲ್ಲದೆ, ಊಟ-ಬಟ್ಟೆಯನ್ನು ಕೊಡಲು ಅಮ್ಮನೂ ಇಲ್ಲದೇ ಮೂವರು ಮಕ್ಕಳು ಅನಾಥವಾಗಿದ್ದಾವೆ..

ಅವನು ಮಾಜಿ ತಾಲೂಕು ಪಂಚಾಯ್ತಿ ಸದಸ್ಯ. ಹಾಲಿ ಗ್ರಾಮ ಪಂಚಾಯ್ತಿ ಮೆಂಬರ್. ತನ್ನ ಗ್ರಾಮಕ್ಕೆ ಅವನೇ ಹೀರೋ. ಮನೆಯವರಿಗೆ ಆತ ಸಹಾಯ ಮಾಡ್ತಿದ್ದನೋ ಇಲ್ವೋ ಆದ್ರೆ, ಊರಿನವರ ಕಷ್ಟಕ್ಕೆ ಮಾತ್ರ ಅವನು ಯಾವತ್ತೂ ಫಸ್ಟ್​​​.. ಆದ್ರೆ ಅವನಿಗಿದ್ದ ಒಂದೇ ಚಟ ಅಂದ್ರೆ ಅದು ಕುಡಿತ. ಎಣ್ಣೆಗೆ ದಾಸನ್ನಾಗಿದ್ದ ಅವನು ಸಂಜೆ 6 ಗಂಟೆಯಾದ್ರೆ ಸಾಕು ಕಂಠ ಪೂರ್ತಿ ಕುಡಿಯುತ್ತಿದ್ದನು. ಕುಡಿದು ಕುಡಿದು ಆವತ್ತೊಂದು ದಿನ ಮಲಗಿದ್ದಲ್ಲೇ ಹೆಣವಾಗಿದ್ದ.. ಆದ್ರೆ ಅವನ ಸಾವನ್ನ ನಂಬೋದಕ್ಕೆ ಯಾರೂ ಕೂಡ ರೆಡಿ ಇರಲಿಲ್ಲ. 

ಇನ್ನು ಗ್ರಾಮದ ನಾಯಕನ ಸಾವನ್ನು ಕಂಡು ಸ್ವತಃ ಗ್ರಾಮಸ್ಥರೇ ಪೊಲೀಸ್​​ ಕಂಪ್ಲೆಂಟ್​​ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರಿಗೆ ಅದು ಮರ್ಡರ್​​ ಅನ್ನೋದು ಸ್ಪಷ್ಟವಾಗಿತ್ತು. ಈ ವಿಚಾರವನ್ನು ಹಿಡಿದು ಎಳೆ ಎಳೆಯಾಗಿ ಆತನಿಗೆ ಸಂಬಂಧಪಟ್ಟ ಒಬ್ಬೊಬ್ಬರನ್ನೇ ವಿಚಾರಣೆ ಮಾಡುತ್ತಾ ಹೋದಂತೆ ಕೆಲವು ಸಾಕ್ಷಿಗಳು ಕೂಡ ಲಭ್ಯವಾದವು. ಅದನ್ನು ಆಧರಿಸಿ ರಾಜು ನಾಯ್ಕ್‌ನ ಹೆಂಡತಿ ವಿಚಾರಣೆ ಮಾಡಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ. 

ಧಾರವಾಡ: ಮಾಟ, ಮಂತ್ರ ಶಂಕೆ, ಮಲಗಿದ ಪತ್ನಿಯ ಕುತ್ತಿಗೆ ಕಡಿದ ಪತಿ

ಗ್ರಾಮ ಪಂಚಾಯಿತಿ ಮೆಂಬರ್ ಆಗಿ ತನ್ನೂರಿನ ಎಲ್ಲರ ಸೇವೆ ಮಾಡುತ್ತಿದ್ದವನು ರಾಜು ನಾಯ್ಕ್. ಆತ ಕುಡಿಯುತ್ತಿದ್ದ ಎನ್ನುವುದು ಬಿಟ್ಟರೆ ಬೇರಾವ ಕೆಟ್ಟ ಅಭ್ಯಾಸವೂ ಇರಲಿಲ್ಲ. ಆದರೆ, ಊರಿಗೆ ಉಪಕಾರಿ, ಮನೆಗೆ ಮಾರಿ ಆಗಿದ್ದಾನೆಂದು ಸ್ವತಃ ಆತನ ಹೆಂಡತಿಯೇ ಕುಡುಕ ಗಂಡನನ್ನು ಕೊಲೆ ಮಾಡಿ ಕಥೆಯನ್ನೇ ಮುಗಿಸಿಬಿಟ್ಟಿದ್ದಳು. ಅಷ್ಟಕ್ಕೂ ಹೆಂಡತಿಯೇ ಗಂಡನ ಕಥೆ ಮುಗಿಸಿದ್ದೇಕೆ..? ತಾಳಿ ಕಟ್ಟಿಸಿಕೊಂಡವಳು ಅಷ್ಟು ಕ್ರೂರಿಯಾಗಿದ್ದೇಕೆ? ಆವತ್ತು ಘಟನೆ ನಡೆದ ರಾತ್ರಿ ಆ ಮನೆಯಲ್ಲಿ ನಡೆದಿದ್ದೇನು ಎನ್ನುವ ವಿವರ ಇಲ್ಲಿದೆ ನೋಡಿ.

ರಾಜು ನಾಯ್ಕ್  ಊರಿನವರಿಗೆ ದಾರಿ ತೋರಿಸುತ್ತಿದ್ರೆ ಆತನ ಹೆಂಡತಿ ಮಾತ್ರ ದಾರಿ ತಪ್ಪಿಬಿಟ್ಟಿದ್ದಳು. ತನ್ನ ಗ್ರಾಮಕ್ಕೆ ದೇವಸ್ಥಾನ ಕಟ್ಟಲು ಬಂದವನ ಜೊತೆಯೇ ಅನೈತಿಕ ಸಂಬಂಧ ಇಟ್ಟುಕೊಂಡುಬಿಟ್ಟಿದ್ದಳು. ಅವಳ ಸಂಬಂಧ ಗಂಡನ ಎದುರಾಳಿಯ ಕಿವಿಗೆ ಬಿದ್ದ ನಂತರ ಆಕೆಯನ್ನ ಬ್ಲ್ಯಾಕ್​ ಮೇಲ್​ ಮಾಡಿ ತನ್ನ ಕೈಗೊಂಬೆ ಮಾಡಿಕೊಂಡುಬಿಟ್ಟಿದ್ದನು. ಆದ್ರೆ ಈ ವಿಷಯ ತಿಳಿದ ಗಂಡ, ಹೆಂಡತಿಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲಾಗಲಿಲ್ಲವೆಂದು ಕುಡಿತಕ್ಕೆ ದಾಸನ್ನಾಗಿಬಿಟ್ಟನು. ಪ್ರತೀ ನಿತ್ಯ ಕುಡಿದು ಬಂದು ಹೆಂಡತಿಯ ಜೊತೆ ಜಗಳಕ್ಕಿಳಿದಿದ್ದನು. 

ಆದ್ರೆ ಯಾವಾಗ ಹೆಂಡತಿಗೆ ಗಂಡನ ಹಿಂಸೆ ಸಾಕೆನ್ನಿಸಿತೋ ಗಂಡನ ಎದುರಾಳಿಯ ಜೊತೆ ಸೇರಿಕೊಂಡು ಅವನನ್ನೇ ಮುಗಿಸಲು ನಿರ್ಧರಿಸಿಬಿಟ್ಟಳು. ಗಂಡ ಕುಡಿಯುತ್ತಿದ್ದ ಎಣ್ಣೆಗೆ ಪ್ರೀಯಕರ ತಂದುಕೊಟ್ಟ ನಿದ್ರೆ ಗುಳಿಗೆಯನ್ನ ಹಾಕಿ ಮಲಗಿಸಿಬಿಟ್ಟಳು. ಆಗ ಗಂಡ ಕುಡಿದು ಮಲಗಿದ್ದಲ್ಲಿಯೇ ನಿದ್ರೆಯಲ್ಲಿಯೇ ಒದ್ದಾಡಿ, ನರಳಿ ನರಳಿ ಪ್ರಾಣ ಬಿಟ್ಟಿದ್ದಾನೆ. ಆದರೆ, ಗಂಡನ ಸಾವಿನ ನಂತರ ಕಣ್ಣೀರಿಟ್ಟು ನವರಂಗಿ ಆಟವಾಡಿದ್ದ ಆಕೆಗೆ ಏನ್​ ಶಿಕ್ಷೆ ಕೊಟ್ಟರೂ ಕಡಿಮೆನೇ. ಇನ್ನೂ  ಆಕೆಗೆ ಕುಮ್ಮಕ್ಕು ನೀಡಿದ್ದ ಪ್ರಿಯಕರ ರಾಜುಗಾಗಿ ಶೋಧ ಕಾರ್ಯ ನಡೀತಿದೆ. ಆದರೆ, ಗ್ರಾಮ ಪಂಚಾಯಿತಿ ಮೆಂಬರ್ ಆಗಿದ್ದ ತಂದೆ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ.

ಬೆಂಗಳೂರು: ಹಣಕ್ಕಾಗಿ ಚಿಕ್ಕಮ್ಮಳ ಕೊಲೆಗೆ ಯತ್ನಿಸಿದ ಸಾಕು ಮಗಳು..!

ಎಲ್ಲರಿಗಿಂತ ಚೆನ್ನಾಗಿ ಭವಿಷ್ಯ ರೂಪಿಸುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ತಂದೆಯ ಸಾವು ನೋಡುವಂತಾಗಿದೆ. ಮತ್ತೊಂದೆಡೆ, ಅನೈತಿಕ ಸಂಬಂಧಕ್ಕಾಗಿ ತಾಳಿ ಕಟ್ಟಿದ ಗಂಡನನ್ನೇ ಕೊಲೆ ಮಾಡಿದ್ದ ತಾಯಿ ಜೈಲು ಸೇರಿದ್ದು, 3 ಮಕ್ಕಳು ಈಗ ಅನಾಥವಾಗಿವೆ. ಅನೈತಿಕ ಸಂಬಂಧಕ್ಕೆ ಇಳಿಯುವ ಮುನ್ನ ಮಕ್ಕಳು, ಮುಂದಿನ ಸಂಸಾರ ಹಾಗೂ ಜೀವನದ ಬಗ್ಗೆ ಯೋಜನೆ ಮಾಡಬೇಕು ಎಂಬುದೇ ಈ ಎಫ್‌ಐಆರ್ ಉದ್ದೇಶವಾಗಿದೆ...

Video Top Stories