ಕಲಬುರಗಿ; ಮಕ್ಕಳ ಮೇಲೆ ಕುದಿಯುವ ಎಣ್ಣೆ ಸುರಿದಿದ್ದ ಮಹಿಳೆಗೆ 5 ವರ್ಷ ಶಿಕ್ಷೆ!
* ಕ್ರೌರ್ಯ ಮೆರೆದ ಮಹಿಳೆಗೆ 5 ವರ್ಷ ಜೈಲುಶಿಕ್ಷೆ
* ಸಂಬಂಧಿಕರ ಮಕ್ಕಳ ಮೇಲೆ ಎಣ್ಣೆ ಸುರಿದಿದ್ದರು
* ಎರಡೂವರೆ ವರ್ಷದ ಹಿಂದೆ ನಡೆದಿದ್ದ ಘಟನೆ
* ಕಲಬುರಗಿಯ ಆನಂದ ನಗರದಲ್ಲಿ ಭಯಾನಕ ಕೃತ್ಯ ನಡೆದಿತ್ತು
ಕಲಬುರಗಿ(ಆ. 20) ಮುದ್ದು ಮಕ್ಕಳ ಮೇಲೆ ಕಾದ ಎಣ್ಣೆ ಸುರಿದು ಕೊಲೆ ಯತ್ನ ಮಾಡಿದ್ದ ಮಹಿಳೆಗೆ ಐದು ವರ್ಷ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಎರಡುವರೆ
ವರ್ಷದ ಹಿಂದೆ ನಡೆದ ಘಟನೆಗೆ ತೀರ್ಪು ಕಲಬುರಗಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಕಲಬುರಗಿಯ 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಮಹತ್ವದ ತೀರ್ಪು ಹೊರಬಂದಿದೆ. ಪೋಷಕರ ಮೇಲಿನ ಮತ್ಸರದಿಂದ ಮಕ್ಕಳ ಮೇಲೆ ಕಾದ ಎಣ್ಣೆ ಸುರಿದು ವಿಕೃತಿ ಮೆರೆದಿದ್ದ ಶ್ರೀದೇವಿ ಶಿಕ್ಷೆಗೆ ಗುರಿಯಾಗಿದ್ದಾರೆ. ಸಾವು ಬದುಕು ನಡುವೆ ಹೋರಾಡಿ ಪವಾಡದ ರೀತಿಯಲ್ಲಿ ಮಕ್ಕಳಾದ ಪಾರ್ವತಿ ಮತ್ತು ಅಹಾನಾ ಬದುಕಿದ್ದರು.
ಪೊಲೀಸ್ ಹುದ್ದೆಗಾಗಿ 400 ಮೀ. ಓಟ ಓಡಿದ ಗರ್ಭಿಣಿ
ಕಳೆದ 2019, ಮಾರ್ಚ್ 25 ರಂದು ಕಲಬುರಗಿಯ ಆನಂದ ನಗರದಲ್ಲಿ ಭಯಾನಕ ಕೃತ್ಯ ನಡೆದಿತ್ತು. ಶ್ರೀದೇವಿ ಕೋರವಾರ ಎನ್ನುವ ಮಹಿಳೆ ತನ್ನ ಸಂಬಂಧಿಕರ ಮಕ್ಕಳಿಬ್ಬರಿಗೆ ಚಾಕ್ ಲೇಟ್ ಕೊಡುವುದಾಗಿ ಕಣ್ಣು ಮುಚ್ಚಿ ಕುಳ್ಳರಿಸಿ ತಲೆ ಮೇಲೆ ಕಾದ ಎಣ್ಣೆ ಸುರಿದು ಪರಾರಿಯಾಗಿದ್ದಳು. ಸಾವು ಗೆದ್ದರೂ ಈಗಲೂ ತೀವ್ರ ಸುಟ್ಟ ಗಾಯದಿಂದ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ.