Gadag: ಕೌಟುಂಬಿಕ ಕಲಹ: ಹೆಂಡ್ತಿ ಮೇಲೆ ಮಚ್ಚಿನಿಂದ 23 ಬಾರಿ ಹಲ್ಲೆ ಮಾಡಿದ ಗಂಡ

*  ಗದಗ ನಗರದ ಲಯನ್‌ ಸ್ಕೂಲ್‌ ಬಳಿ ನಡೆದ ಘಟನೆ
*  ಮೊದಲನೆ ಮದುವೆ ಮುಚ್ಚಿಟ್ಟು 2ನೇ ವಿವಾಹವಾಗಿದ್ದ ಇಜಾಜ್‌
*  ಗಂಡನ ಕಾಟ ತಾಳಲಾರದೆ ಅಪೂರ್ವ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದ ಅಪೂರ್ವ
 

Share this Video
  • FB
  • Linkdin
  • Whatsapp

ಗದಗ(ಮಾ.11): ಕೌಟುಂಬಿಕ ಕಲಹದಿಂದ ವ್ಯಕ್ತಿಯೊಬ್ಬ ತನ್ನ ಮಡದಿಗೆ ಮಚ್ಚಿನಿಂದ 23 ಬಾರಿ ಹಲ್ಲೆ ಮಾಡಿದ ಘಟನೆ ಗದಗ ನಗರದಲ್ಲಿ ಇಂದು(ಶುಕ್ರವಾರ) ನಡೆದಿದೆ. ಆರೋಪಿ ಇಜಾಜ್‌ ಮೊದಲನೆ ಮದುವೆ ಮುಚ್ಚಿಟ್ಟು 2ನೇ ವಿವಾಹವಾಗಿದ್ದನು. ಮದುವೆ ವಿಚಾರ ತಿಳಿಯುತ್ತಿದ್ದಂತೆ ಹೆಂಡತಿ ಅಪೂರ್ವ ತವರು ಮನೆ ಸೇರಿದ್ದಳು. ಅಪೂರ್ವ ನಿವಾಸಕ್ಕೆ ಬಂದು ಇಜಾಜ್‌ ಗಲಾಟೆ ಮಾಡುತ್ತಿದ್ದ, ಹೀಗಾಗಿ ತನ್ನ ಗಂಡನ ಕಾಟ ತಾಳಲಾರದೆ ಅಪೂರ್ವ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದರು. ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಕ್ಕೆ ಇಜಾಜ್‌ ಕೆಂಡಾಮಂಡಲನಾಗಿದ್ದನಂತೆ. ಪತ್ನಿ ಅಪೂರ್ವ ಮೈದಾನದಲ್ಲಿ ಸ್ಕೂಟಿ ಕಲಿಯುತ್ತಿದ್ದ ಸಂದರ್ಭದಲ್ಲಿ ಅಪೂರ್ವ ಮೇಲೆ ಇಜಾಜ್‌ ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ.

ಜನರಿಗೆ ಮೋದಿ ಬಗ್ಗೆ ವಿಶ್ವಾಸವಿತ್ತು ಅಭಿವೃದ್ಧಿ ಕಾರ್ಯಕ್ಕೆ ಮನ್ನಣೆ: ಸಚಿವ ಜೋಶಿ

Related Video