ಬೆಳಗಾವಿ: ಅನೈತಿಕ ಸಂಬಂಧದ ಶಂಕೆ, ಬಸ್‌ ಅಡ್ಡಗಟ್ಟಿ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ

*  ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಆಲೂರು ಕೆಎಂ ಗ್ರಾಮದ ಬಳಿ ನಡೆದ ಘಟನೆ
*  ಸಂಕೇಶ್ವರದಿಂದ ಬಾಡ ಗ್ರಾಮಕ್ಕೆ ತೆರಳುತ್ತಿದ್ದ ಪತ್ನಿ
*  ಆರೋಪಿಯನ್ನ ಬಂಧಿಸಿದ ಪೊಲೀಸರು 

First Published Oct 2, 2021, 12:54 PM IST | Last Updated Oct 2, 2021, 1:01 PM IST

ಬೆಳಗಾವಿ(ಅ.02): ಚಲಿಸುತ್ತಿರುವ ಬಸ್‌ನನ್ನ ಅಡ್ಡಗಟ್ಟಿ ಪತ್ನಿ ಮೇಲೆ ಪತಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಆಲೂರು ಕೆಎಂ ಗ್ರಾಮದ ಬಳಿ ನಡೆದಿದೆ. ಪತ್ನಿ ವಂದನಾ ಹಟ್ಟಿಕರ್ ಮೇಲೆ ಪತಿ ಪ್ರವೀಣ್‌ ಕಾಂಬ್ಳೆ ಹಲ್ಲೆ ಮಾಡಿದ್ದಾನೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಹಲ್ಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ. ಸಂಕೇಶ್ವರದಿಂದ ಬಾಡ ಗ್ರಾಮಕ್ಕೆ ವಂದನಾ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಗಾಯಗೊಂಡ ವಂದನಾ ಅವರನ್ನ ಬಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಪ್ರವೀಣ್‌ ಕಾಂಬ್ಳೆಯನ್ನ ಪೊಲೀಸರು ಬಂಧಿಸಿದ್ದಾರೆ.  

ಇನ್ನೆರಡು ದಿನಗಳಲ್ಲಿ ರೈತರ ಹಣ ಪಾವತಿಸಿ, ಸಕ್ಕರೆ ಕಾರ್ಖಾನೆ ಮಾಲಿಕರಿಗೆ ಡೆಡ್‌ಲೈನ್

Video Top Stories