HD Revanna: ರಾತ್ರಿಯಿಡಿ ಎಸ್‌ಐಟಿ ಕಚೇರಿಯಲ್ಲಿ ಕಳೆದ ರೇವಣ್ಣ: ಸಿಐಡಿ ಕಚೇರಿಗೆ ಎಂಟ್ರಿ ಆಗುತ್ತಿದ್ದಂತೆ ಕಣ್ಣೀರು !

ಸಿಐಡಿ ಕಚೇರಿ ಒಳಗೆ ಎಂಟ್ರಿ ಆಗುತ್ತಿದ್ದಂತೆ ರೇವಣ್ಣ ಕಣ್ಣೀರು ಹಾಕಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ನಿನ್ನೆ ರಾತ್ರಿಯನ್ನು ಎಸ್‌ಐಟಿ ಕಚೇರಿಯಲ್ಲಿ ರೇವಣ್ಣ ಕಳೆದಿದ್ದಾರೆ.

Share this Video
  • FB
  • Linkdin
  • Whatsapp

ಜೆಡಿಎಸ್‌ನಿಂದ ಉಚ್ಛಾಟನೆಗೊಂಡ ಹಾಸನದ ಸಂಸದ ಪ್ರಜ್ವಲ್ ರೇವಣ್ಣ(Prajwal revanna) ಅವರಿಂದ ಅತ್ಯಾಚಾರಕ್ಕೆ ಒಳಗಾಗಿದ್ದರೆನ್ನಲಾದ ಮಹಿಳೆಯರನ್ನು ಕಿಡ್ನಾಪ್ ಮಾಡಿ ಮಗನನ್ನು ರಕ್ಷಣೆ ಮಾಡಲು ಮುಂದಾಗಿದ್ದ ಮತ್ತೊಂದು ಲೈಂಗಿಕ ಕಿರುಕುಳದ(Sexual harassment) ಆರೋಪಿ ಶಾಸಕ ಹೆಚ್.ಡಿ. ರೇವಣ್ಣ(HD Revanna) ಅವರನ್ನು ವಿಶೇಷ ತನಿಖಾ ತಂಡದ (SIT) ಅಧಿಕಾರಿಗಳು ಬಂಧಿಸಿದ್ದಾರೆ. ಬಳಿಕ ಸಿಐಡಿ(CID) ಕಚೇರಿ ಒಳಗೆ ಎಂಟ್ರಿ ಆಗುತ್ತಿದ್ದಂತೆ ರೇವಣ್ಣ ಕಣ್ಣೀರು ಹಾಕಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ನಿನ್ನೆ ರಾತ್ರಿಯನ್ನು ಎಸ್‌ಐಟಿ ಕಚೇರಿಯಲ್ಲಿ ರೇವಣ್ಣ ಕಳೆದಿದ್ದಾರೆ. ಅಲ್ಲಿ ಒಂದು ಬೆಡ್‌ ಜೊತೆ ಒಂದು ಚೇರ್‌ನನ್ನು ಮಾತ್ರ ನೀಡಲಾಗಿದೆಯಂತೆ. ಇಂದು ಕೆಲ ಗಂಟೆ ರೇವಣ್ಣ ವಿಚಾರಣೆಯನ್ನು ಎಸ್‌ಐಟಿ ನಡೆಸಲಿದೆ.

ಇದನ್ನೂ ವೀಕ್ಷಿಸಿ: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ತನಿಖೆ ದಾರಿ ತಪ್ಪಿದೆಯಾ? ಎಸ್‌ಐಟಿ ಅಧಿಕಾರಿಗಳು ಯಾಕೆ ಹೀಗೆ ಮಾಡ್ತಿದ್ದಾರೆ?

Related Video