ಟ್ರಾಫಿಕ್ ಪೊಲೀಸರ ಕಿರುಕುಳಕ್ಕೆ ಬೇಸತ್ತು ಮಾಂಗಲ್ಯ ಮಾರಲು ಮುಂದಾದ ಮಹಿಳೆ
ಬೆಳಗಾವಿ ಟ್ರಾಫಿಕ್ ಪೊಲೀಸರಿಂದ ಅಮಾನವೀಯ ವರ್ತನೆ/ ಟ್ರಾಫಿಕ್ ಪೊಲೀಸರ ಕಿರುಕುಳಕ್ಕೆ ಮಾಂಗಲ್ಯ ಮಾರಿ ದಂಡ ಕಟ್ಟಲು ಮುಂದಾಗಿದ್ದ ಮಹಿಳೆ/ ಕಳೆದ ಭಾನುವಾರ ಮಧ್ಯಾಹ್ನ ಬೆಳಗಾವಿ ಬಸ್ ನಿಲ್ದಾಣ ಬಳಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ/ ಹೆಲ್ಮೆಟ್ ಇಲ್ಲ ಅಂತಾ ದಂಪತಿ ತೆರಳುತ್ತಿದ್ದ ಬೈಕ್ ತಡೆದಿದ್ದ ಟ್ರಾಫಿಕ್ ಪೊಲೀಸರು/ ಹುಲ್ಲೋಳ್ಳಿಹಟ್ಟಿಯ ದಂಪತಿಯನ್ನು ತಡೆದಿದ್ದ ಟ್ರಾಫಿಕ್ ಪೊಲೀಸರು
ಬೆಳಗಾವಿ (ಫೆ. 25) ಬೆಳಗಾವಿ ಟ್ರಾಫಿಕ್ ಪೊಲೀಸರ ಅಮಾನವೀಯ ವರ್ತನೆ ಏನು ಹೇಳಬೇಕು ತೋಚುತ್ತಿಲ್ಲ. ಟ್ರಾಫಿಕ್ ಪೊಲೀಸರ ಕಿರುಕುಳಕ್ಕೆ ಮಾಂಗಲ್ಯ ಮಾರಿ ದಂಡ ಕಟ್ಟಲು ಮಹಿಳೆ ಮುಂದಾಗಿದ್ದಾಳೆ.
ರಸ್ತೆ ನಿಯಮಗಳಲ್ಲಿನ ಮಹತ್ವದ ಬದಲಾವಣೆ ತಿಳಿದುಕೊಳ್ಳಿ
ಕಳೆದ ಭಾನುವಾರ ಮಧ್ಯಾಹ್ನ ಬೆಳಗಾವಿ ಬಸ್ ನಿಲ್ದಾಣ ಬಳಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ ಹೆಲ್ಮೆಟ್ ಇಲ್ಲ ಎಂದು ದಂಪತಿ ತೆರಳುತ್ತಿದ್ದ ಬೈಕ್ ತಡೆದಿದ್ದ ಟ್ರಾಫಿಕ್ ಪೊಲೀಸರು ರಸೀದಿ ನೀಡಿ ದಂಡ ಕಟ್ಟಿ ಎಂದಿದ್ದರು. ಮಾರ್ಕೆಟ್ ನಲ್ಲಿ ಎಲ್ಲಾ ಹಣ ಖಾಲಿಯಾಗಿದೆ ಕೇವಲ ನೂರು ರೂಪಾಯಿ ಇದೆ ಎಂದಾಗ ದಂಡ ಕಟ್ಟಿಯೇ ಹೋಗಬೇಕು ಅಂತಾ ಟ್ರಾಫಿಕ್ ಎಎಸ್ಐ ಅಲ್ತಾಫ್ ಹುಸೇನ್ ಕೊಲ್ಲಾಪುರೆ ಪಟ್ಟು ಹಿಡಿದಿದ್ದಾರೆ. ಎರಡು ಗಂಟೆಗಳ ಕಾಲ ನಿಂತು ಸುಸ್ತಾಗಿ ಮಾಂಗಲ್ಯ ಸರ ಮಾರಲು ಮಹಿಳೆ ಮುಂದಾಗಿದ್ದರು. ಪೊಲೀಸರ ಇಂಥ ವರ್ತನೆಗೆ ನಾಗರಿಕರಿಂದ ಆಕ್ರೋಶ ಕೇಳಿ ಬಂದಿದೆ.