Bitcoin Scam| ಸೆಕ್ಯೂರಿಟಿ ಕೊಡಲು ಪೊಲೀಸ್ರು ಸಿದ್ಧ: ಭದ್ರತೆ ಪಡೆಯೋಕೆ ಶ್ರೀಕಿನೇ ಇಲ್ಲ..!

*  ಶ್ರೀಕಿಗೆ ಭದ್ರತೆ ಕೊಡಲು ಮುಂದಾದ ಖಾಕಿ ಪಡೆ 
*  ಶ್ರೀಕಿಗೆ ಭದ್ರತೆ ಕೊಡಲು ಟ್ವೀಟ್‌ ಮಾಡಿದ್ದ ಸಿದ್ದರಾಮಯ್ಯ
*  ಡಿಸಿಪಿ ವಿನಾಯಕ್‌ ವಸಂತ ಪಾಟೀಲ್‌ಗೆ ಭದ್ರತೆಯ ಹೊಣೆ 

First Published Nov 24, 2021, 10:56 AM IST | Last Updated Nov 24, 2021, 11:13 AM IST

ಬೆಂಗಳೂರು(ನ.24): ಹ್ಯಾಕರ್‌ ಶ್ರೀಕಿ ಪೊಲೀಸರಿಗೆ ತಲೆನೋವು ತಂದಿಟ್ಟಿದ್ದಾನೆ. ಹೌದು, ಶ್ರೀಕಿಗೆ ಜೀವ ಬೆದರಿಕೆ ಇದೆ. ಹೀಗಾಗಿ ಶ್ರೀಕಿಗೆ ಭದ್ರತೆ ಕೊಡಲು ಖಾಕಿ ಪಡೆ ಮುಂದಾಗಿದೆ. ಆದರೆ, ಭದ್ರತೆ ಪಡೆಯೋದಕ್ಕೆ ಶ್ರೀಕಿನೇ ಇಲ್ಲ. ಭದ್ರತೆಗೆ ಆದೇಶ ಹೊರಡಿಸಿ ವಾರ ಕಳೆದರೂ ಶ್ರೀಕೃಷ್ಣ ಪತ್ತೇನೆ ಇಲ್ಲ. ಶ್ರೀಕಿಗೆ ಭದ್ರತೆ ಕೊಡಲು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್‌ ಮಾಡಿದ್ದರು. ಶ್ರೀಕಿ ತಂದೆಯ ಮನೆಯಲ್ಲೂ ಪೊಲೀಸರು ಪರಿಶೀಲಿಸಿದ್ದಾರೆ. ಡಿಸಿಪಿ ವಿನಾಯಕ್‌ ವಸಂತ ಪಾಟೀಲ್‌ ಅವರಿಗೆ ಭದ್ರತೆಯ ಹೊಣೆ ಹೊರಿಸಲಾಗಿದೆ. ಶ್ರೀಕಿ ಬಗ್ಗೆ ಆತನ ಕುಟಂಬದವರೂ ಕೂಡ ಯಾವುದೇ ಮಾಹಿತಿ ನೀಡುತ್ತಿಲ್ಲ. 

ACB Raid: ಏಕಕಾಲದಲ್ಲಿ 60 ಕಡೆ ದಾಳಿ, ಭ್ರಷ್ಟರಿಗೆ ನಡುಕ ಹುಟ್ಟಿಸಿದ ಅಧಿಕಾರಿಗಳು