ಸರ್ಕಾರಿ ಕಚೇರಿಯಲ್ಲಿ ಥಂಬ್ ಕೊಡುವ ಮುನ್ನ ಎಚ್ಚರ! ಫಿಂಗರ್ ಪ್ರಿಂಟ್ ಕೊಟ್ಟು ಹಣ ಕಳೆದುಕೊಂಡ ಜನ !
ಬೀದರ್‌ನಲ್ಲೂ ಸದ್ದಿಲ್ಲದೇ ಜನರ ಅಕೌಂಟ್‌ಗೆ ಕನ್ನ ಹಾಕಲಾಗುತ್ತಿದೆ. ಆಧಾರ್ ಎನೇಬಲ್ ಪೇಮೆಂಟ್ ಸಿಸ್ಟಂ ಮೂಲಕ ಹಣ ಡ್ರಾ ಮಾಡಲಾಗುತ್ತಿದೆ. ಬೀದರ್ ಸಬ್ ರಿಜಿಸ್ಟಾರ್ ಕಚೇರಿಯಲ್ಲೇ 150 ಪ್ರಕರಣಗಳು ಪತ್ತೆಯಾಗಿದೆ.
ಧಾರ್ ಅಪ್ಡೇಟ್ ಮಾಡಿಸಬೇಕು ಅಥವಾ ಬೇರೆ ಯಾವುದೋ ಸರ್ಕಾರಿ ಸೌಲಭ್ಯಕ್ಕೆ ಥಂಬ್ ನೀಡಿದ್ದೀರಾ. ಹಾಗಾದ್ರೆ ನಿಮ್ಮ ಹಣಕ್ಕೆ ಖಾತ್ರಿ ಇಲ್ಲ ಹುಷಾರ್. ಸಬ್ ರೆಜಿಸ್ಟ್ರಾರ್ ಕಚೇರಿಗೆ(Sub-registrar) ಥಂಬ್ ಕೊಟ್ಟವರ ಬ್ಯಾಂಕ್ ಅಕೌಂಟ್ನಿಂದ(Bank Account) ಹಣ ಲೂಟಿಯಾಗಿದೆ. ವಂಚಕರು ಜನಸಾಮಾನ್ಯರ ಬ್ಯಾಂಕ್ ಅಕೌಂಟ್ಗಳಿಂದ 5-10 ಸಾವಿರ ಹಣ ದೋಚಿದ್ದಾರೆ. ಸಬ್ ರಿಜಿಸ್ಟಾರ್ ಕಚೇರಿಗಳ ವೆಬ್‌ಸೈಟ್‌ಗಳಿಗೆ ಸೈಬರ್ ಕಳ್ಳರು ಲಗ್ಗೆ ಇಟ್ಟಿದ್ದಾರೆ. ಸಬ್ ರೆಜಿಸ್ಟ್ರಾರ್ ಕಚೇರಿಯಲ್ಲಿ ಉಪಯೋಗಿಸುವ ಕಾವೇರಿ ಆ್ಯಪ್ ಹ್ಯಾಕ್(Kavery App hack) ಮಾಡಿ ಕೃತ್ಯ ಎಸಗಲಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿ, ಗೃಹಲಕ್ಷ್ಮಿ ಯೋಜನೆಗಳೇ ಟಾರ್ಗೆಟ್ ಆಗಿದ್ದು, ನಿಮ್ಮ ಆಧಾರ್ ಸಂಖ್ಯೆ, ಬಯೋಮೆಟ್ರಿಕ್ ಬಳಸಿ ಹಣ ಡ್ರಾ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಂಡ ಮೋದ ಹೋಗುವುದರಿಂದ ಬಚಾವ್ ಆಗಿ ಎನ್ನುತ್ತಿದ್ದಾರೆ ಬೀದರ್ ಎಸ್ಪಿ. ವಂಚನೆಯಿಂದ ಪಾರಾಗಲು M-ADHAR ಆ್ಯಪ್ ಡೌನ್ಲೋಡ್ ಮಾಡಿಕೊಂಡು ಬಯೊಮೆಟ್ರಿಕ್ ಮಾಹಿತಿ ಅನೆಬಲ್ ಮಾಡಿಕೊಳ್ಳುವಂತೆ ಎಸ್ಪಿ ಅವರು ಸಲಹೆ ಕೊಟ್ಟಿದಾರೆ,. ಇದೇ ರೀತಿ ರಾಜ್ಯಾದ್ಯಂತ ಹಲವು ಪ್ರಕರಣಗಳು ನಡೆದಿದೆ,. ಜಿಲ್ಲೆಯಲ್ಲಿ ನಡೆದ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಸರ್ಕಾರಿ ಕಚೇರಿಗಳು ಉಪಯೋಗಿಸುವ ಸಾಫ್ಟ್ವೇರ್ಗಳನ್ನೇ ಸೈಬರ್ ಕ್ರೈಂ ಕುಳಗಳು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ವಿವಿಧ ಕೆಲಸ ಕಾರ್ಯಗಳಿಗೆ ಫಿಂಗರ್ ಪ್ರಿಂಟ್ ನೀಡುವ ಮುನ್ನ ಎಚ್ಚರವಹಿಸುವುದು ಒಳಿತು.
ಇದನ್ನೂ ವೀಕ್ಷಿಸಿ: ಕೋಟ್ಯಾಂತರ ರೂ. ಸ್ಮಾರ್ಟ್ ಸಿಟಿ ಯೋಜನೆ ಕಟ್ಟಡ: ಕಾಂಗ್ರೆಸ್-ಬಿಜೆಪಿ ಪಾಲಿಟಿಕ್ಸ್‌ಗೆ ಬಲಿಯಾದ ಕದ್ರಿ ಫುಡ್ ಕೋರ್ಟ್