Hebbal Flyover: ರಸ್ತೆ ದಾಟುತ್ತಿದ್ದ ಬಾಲಕಿಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ, ಬಾಲಕಿ ಸಾವು

ಹೆಬ್ಬಾಳ ಫ್ಲೈ ಓವರ್ ಮೇಲೆ ಸರಣಿ ಅಪಘಾತವಾಗುತ್ತದೆ. ರಸ್ತೆ ದಾಟುತ್ತಿದ್ದವರ ಮೇಲೆ ಬಿಬಿಎಂಪಿ ಕಸದ ಲಾರಿ ನುಗ್ಗಿದೆ.  ಮಹಿಳೆ, ಬಾಲಕಿ ಸೇರಿ ಮೂವರು ರಸ್ತೆ ದಾಟುತ್ತಿದ್ದರು. ರಸ್ತೆ ದಾಟುತ್ತಿದ್ದರಿಂದ ಬೈಕ್, ಕಾರ್ ನಿಲ್ಲಿಸಿದ್ದರು ಸವಾರರು. 

First Published Mar 21, 2022, 5:04 PM IST | Last Updated Mar 21, 2022, 5:04 PM IST

ಬೆಂಗಳೂರು (ಮಾ. 21): ಹೆಬ್ಬಾಳ ಫ್ಲೈ ಓವರ್ ಮೇಲೆ ಸರಣಿ ಅಪಘಾತವಾಗುತ್ತದೆ. ರಸ್ತೆ ದಾಟುತ್ತಿದ್ದವರ ಮೇಲೆ ಬಿಬಿಎಂಪಿ ಕಸದ ಲಾರಿ ನುಗ್ಗಿದೆ.  ಮಹಿಳೆ, ಬಾಲಕಿ ಸೇರಿ ಮೂವರು ರಸ್ತೆ ದಾಟುತ್ತಿದ್ದರು. ರಸ್ತೆ ದಾಟುತ್ತಿದ್ದರಿಂದ ಬೈಕ್, ಕಾರ್ ನಿಲ್ಲಿಸಿದ್ದರು ಸವಾರರು. ಹಿಂದಿನಿಂದ ವೇಗವಾಗಿ ಬಂದ ಲಾರಿ, ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರನಿಗೆ ಗಾಯಗಳಾಗಿದ್ದು, ಬಾಲಕಿಯೋರ್ವಳು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸ್ಟೆಲ್ಲಾ ಮೇರಿಸ್ ಸ್ಕೂಲ್‌ನಲ್ಲಿ 9 ನೇ ತರಗತಿ ಓದುತ್ತಿದ್ದ ಬಾಲಕಿ ಅಕ್ಷಯಾ ಮೃತ ದುರ್ದೈವಿ.