ಹೊಸಪೇಟೆ: ಗಣಪತಿ ವಿಸರ್ಜನೆ ವೇಳೆ ಭಾರೀ ದುರಂತ, ಕಾಲುವೆಗೆ ಬಿದ್ದ ಕ್ರೇನ್!

ನಗರದಲ್ಲಿ ಗಣಪತಿ ವಿಸರ್ಜನೆ ವೇಳೆ ಮೂರ್ತಿ ಸಮೇತ ಕ್ರೇನ್ ಪಲ್ಟಿಯಾಗಿ ಯುವಕನೊಬ್ಬ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಹೊಸಪೇಟೆಯ ಟಿಬಿ ಡ್ಯಾಂ ಪ್ರದೇಶದಲ್ಲಿ ಪ್ರತಿಷ್ಠಾಪಿಸಿದ್ದ 34 ಅಡಿ ಎತ್ತರದ ಗಣಪತಿ ಮೂರ್ತಿ 11ನೇ‌ ದಿನ ವಿಸರ್ಜನೆ ವೇಳೆ ಅವಘಡ ನಡೆದಿದೆ.

Share this Video
  • FB
  • Linkdin
  • Whatsapp

ಹೊಸಪೇಟೆ (ಸೆ.11): ನಗರದಲ್ಲಿ ಗಣಪತಿ ವಿಸರ್ಜನೆ ವೇಳೆ ಮೂರ್ತಿ ಸಮೇತ ಕ್ರೇನ್ ಪಲ್ಟಿಯಾಗಿ ಯುವಕನೊಬ್ಬ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಹೊಸಪೇಟೆಯ ಟಿಬಿ ಡ್ಯಾಂ ಪ್ರದೇಶದಲ್ಲಿ ಪ್ರತಿಷ್ಠಾಪಿಸಿದ್ದ 34 ಅಡಿ ಎತ್ತರದ ಗಣಪತಿ ಮೂರ್ತಿ 11ನೇ‌ ದಿನ ವಿಸರ್ಜನೆ ವೇಳೆ ಅವಘಡ ನಡೆದಿದ್ದು, ಡ್ಯಾಂ ಪ್ರದೇಶದ ನಿವಾಸಿಗಳಾದ ಅಶೋಕ್ (18) ಸಾವನಪ್ಪಿದ್ದು, ಸಾಯಿ ನಿಖಿಲ್ ಎಂಬ ಯುವಕ ( 18) ಗಾಯಗೊಂಡಿದ್ದಾನೆ. ಹೊಸಪೇಟೆಯ ಟಿಬಿ ಡ್ಯಾಂನ ಹೊರವಲದ ಕಾಲುವೆಯ ಬಳಿ ಶನಿವಾರ ಮಧ್ಯರಾತ್ರಿ 1.25ರ ಸುಮಾರಿಗೆ ಈ ದುರಂತ ನಡೆದಿದೆ. ಕ್ರೇನ್ ನಡುವೆ ಸಿಲುಕಿ ಒಬ್ಬ ಸಾವಿಗೀಡಾಗಿ, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಟಿಬಿ ಡ್ಯಾಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Video