Asianet Suvarna News Asianet Suvarna News

ಸಿಸಿಬಿ ಮುಂದೆ ಸತ್ಯ ಬಾಯ್ಬಿಟ್ಟ ಯುವರಾಜ್, ರಾಧಿಕಾಗೆ ಮತ್ತೆ ಬುಲಾವ್‌ ಕೊಡುತ್ತಾ ಸಿಸಿಬಿ?

Feb 3, 2021, 12:58 PM IST

ಬೆಂಗಳೂರು (ಫೆ. 03): ಮಹಾವಂಚಕ ಯುವರಾಜ್ ವಂಚನೆ ಕೇಸ್‌ಗೆ ಸಂಬಂಧಿಸಿದಂತೆ ಮತ್ತಷ್ಟು ಅಪ್‌ಡೇಟ್ಸ್ ಸಿಗುತ್ತಿದೆ. ಯುವರಾಜ್‌ನಿಂದ 60 ಲಕ್ಷ ಪಡೆದಿರುವುದಾಗಿ ರಾಧಿಕಾ ಕುಮಾರಸ್ವಾಮಿ ಹೇಳಿದ್ದರು. ಆದರೆ ಪಡೆದಿದ್ದು 60 ಲಕ್ಷವಲ್ಲ, ಬರೋಬ್ಬರಿ 1.27 ಕೋಟಿ. ಹೀಗಂತ ಯುವರಾಜ್ ಸಿಸಿಬಿ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. 

ಯುವರಾಜನಿಂದ ರಾಧಿಕಾ ಪಡೆದಿದ್ದು 60 ಲಕ್ಷವಲ್ಲ, ಪೊಲೀಸರ ಎದುರು ತಪ್ಪೊಪ್ಪಿಕೊಂಡ ಸ್ವಾಮಿ

ಪ್ರಕರಣ ಬೆಳಕಿಗೆ ಬಂದು ಸಿಸಿಬಿ ವಿಚಾರಣೆಗೂ ಮುನ್ನ 75 ಲಕ್ಷವನ್ನು ರಾಧಿಕಾ ವಾಪಸ್ ಮಾಡಿದ್ದಾರಂತೆ. ಹಾಗಾದರೆ ಸಿಸಿಬಿ ಮುಂದೆ ಸುಳ್ಳು ಹೇಳಿದ್ರಾ.? ಇದೀಗ ಸಿಸಿಬಿಯಿಂದ ಮತ್ತೊಮ್ಮೆ ವಿಚಾರಣೆ ಎದುರಿಸ್ತಾರಾ.? ಸುಳ್ಳು ಹೇಳಿಕೆ ಸ್ವೀಟಿಗೆ ಮುಳುವಾಗುತ್ತಾ..?