Asianet Suvarna News Asianet Suvarna News

ಮಾಜಿ ಶಾಸಕ ನರಸಿಂಹ ಸ್ವಾಮಿ ವಿರುದ್ಧ ಕೋಟಿ ಕೋಟಿ ವಂಚನೆ, ಜೀವ ಬೆದರಿಕೆ ಆರೋಪ: FIR ದಾಖಲು

Aug 8, 2021, 12:14 PM IST
  • facebook-logo
  • twitter-logo
  • whatsapp-logo

ಬೆಂಗಳೂರು (ಆ. 08): ಮಾಜಿ ಕೇಂದ್ರ ಸಚಿವ ಆರ್ ಎಲ್ ಜಾಲಪ್ಪ ಪುತ್ರ ಮಾಜಿ ಶಾಸಕ ನರಸಿಂಹ ಸ್ವಾಮಿ ವಿರುದ್ಧ ಕೋಟಿ ಕೋಟಿ ವಂಚನೆ ಹಾಗೂ ಜೀವ ಬೆದರಿಕೆ ಆರೋಪ ಕೇಳಿ ಬಂದಿದೆ. ದೊಡ್ಡ ಬಳ್ಳಾಪುರದಿಂದ ನರಸಿಂಹ ಸ್ವಾಮಿ 3 ಬಾರಿ ಶಾಸಕರಾಗಿದ್ದಾರೆ. 

2018 ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಸ್ನೇಹಿತ ಸಂಗಮ್ ದೇವ್ ಬಳಿ 3 ಕೋಟಿ ರೂ ಹಣ ಪಡೆದಿದ್ದರು. ಇದೀಗ ಹಣವನ್ನು ಕೊಡದೇ ವಂಚಿಸಿದ್ದಾರೆ. ವಾಪಸ್ ಕೊಡುವಂತೆ ಕೇಳಿದರೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂಗಮ್ ದೇವ್ ದೂರು ನೀಡಿದ್ದಾರೆ.  ಇದೀಗ ನರಸಿಂಹ ಸ್ವಾಮಿ ಹಾಗೂ ಅವರ ಪತ್ನಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.