Asianet Suvarna News Asianet Suvarna News
breaking news image

Bengaluru News: ನಡು ರಸ್ತೆಯಲ್ಲೇ ಚಾಲಕರ ನಡುವೆ ಫೈಟಿಂಗ್! ಸಣ್ಣ ವಿಚಾರಕ್ಕೆ ಇಷ್ಟು ದೊಡ್ಡ ಫೈಟಾ?

ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ಇಬ್ಬರು ಚಾಲಕರ ನಡುವೆ ಶುರುವಾದ ಕಿರಿಕ್ ಹೊಡೆದಾಟದ ವರೆಗೆ ತಲುಪಿದೆ. ಹೆಲ್ಮೆಟ್ ನಿಂದ ಕಾರಿನ ಗಾಜಿಗೆ ಬೈಕ್ ಚಾಲಕ  ಹೊಡೆದಿದ್ದಾನೆ, ಇದರಿಂದ ಕುಪಿತಗೊಂಡ ಕಾರು ಚಾಲಕ ಕಾರನ್ನು ರಸ್ತೆ ಮಧ್ಯೆ ನಿಲ್ಲಿಸಿ ಬೈಕ್ ಸವಾರನ ಮೇಲೆ‌ ಹಲ್ಲೆ ಮಾಡಿದ್ದಾನೆ.

ಬೆಂಗಳೂರಿನಲ್ಲಿ(Bengaluru)‌ ನಡು ರಸ್ತೆಯಲ್ಲೇ ಚಾಲಕರ ನಡುವೆ ಫೈಟಿಂಗ್ ನಡೆದಿದೆ. ಬೈಕ್(Bike) ಟಚ್ ಆಗಿದ್ದಕ್ಕೆ ಇಬ್ಬರ ನಡುವೆ ಶುರುವಾದ ಕಿರಿಕ್ ಹೊಡೆದಾಟದ ವರೆಗೆ ತಲುಪಿದೆ. ಅಲ್ಲದೆ ಹೆಲ್ಮೆಟ್ ನಿಂದ ಕಾರಿನ(Car) ಗಾಜಿಗೆ ಬೈಕ್ ಚಾಲಕ  ಹೊಡೆದಿದ್ದಾನೆ, ಇದರಿಂದ ಕುಪಿತಗೊಂಡ ಕಾರು ಚಾಲಕ ಕಾರನ್ನು ರಸ್ತೆ ಮಧ್ಯೆ ನಿಲ್ಲಿಸಿ ಬೈಕ್ ಸವಾರನ ಮೇಲೆ‌ ಹಲ್ಲೆ(Attack) ಮಾಡಿದ್ದಾನೆ. ಸರ್ಜಾಪುರ ರಸ್ತೆಯಲ್ಲಿ ಮೇ 17 ರಂದು ಈ ನಡೆದ ನಡೆದಿದೆ. ಈ ವೇಳೆ ಕಾರು ಚಾಲಕ  ಎಕ್ಸ್‌ನಲ್ಲಿ ವಿಡಿಯೋ ಶೇರ್‌ ಮಾಡಿಕೊಂಡಿದ್ದಾನೆ. ಜೊತೆಗೆ ಇದನ್ನು ಗೃಹ ಸಚಿವರಿಗೆ ಟ್ಯಾಗ್ ಸಹ ಮಾಡಲಾಗಿದೆ. 

ಪತ್ನಿ ಹಾಗೂ 3 ವರ್ಷದ ಮಗಳ ಜೊತೆ ಕಾರ್ ನಲ್ಲಿ ಹೋಗ್ತಿದ್ದೆ, ಕಾರ್ ಟಚ್ ಆಯ್ತು ಅಂತ ಬೈಕ್ ಚಾಲಕನಿಂದ ನನ್ನ ಮೇಲೆ ಹಲ್ಲೆ ನಡೆದಿದೆ. ದಯವಿಟ್ಟು ನ್ಯಾಯ ಕೊಡಿಸಿ ಅಂತ ವಿಡಿಯೋ ಪೋಸ್ಟ್ ಮಾಡಿ ಮನವಿ ಮಾಡಿಕೊಮಡಿದ್ದಾನೆ. ಜೊತೆಗೆ ಘಟನೆ ಸಂಬಂಧ ವರ್ತೂರು ಪೊಲೀಸ್ ಠಾಣೆಗೆ ಕಾರು ಚಾಲಕ ಅಖಿಲ್ ದೂರು ನೀಡಿದ್ದಾನೆ. ಪರಿಣಾಮ ಬೈಕ್ ಚಾಲಕ ಜಗದೀಶ್ ಎಂಬಾತನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಓವರ್ ಟೇಕ್ ಮಾಡಲು ಬಿಡಲಿಲ್ಲ ಎಂದು ಬೈಕ್ ಚಾಲಕನಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ.

ಇದನ್ನೂ ವೀಕ್ಷಿಸಿ:  ಮೇಲ್ಮನೆಯ 11 ಸ್ಥಾನಗಳಿಗೆ ಚುನಾವಣೆ: ಕಾಂಗ್ರೆಸ್ ಪಾಳಯದಲ್ಲಿ ಆಕಾಂಕ್ಷಿಗಳಿಂದ ತೀವ್ರ ಲಾಬಿ!

Video Top Stories