ಎರಡು ಅವನದ್ದು, ಮತ್ತೊಂದು ಯಾರದ್ದು? ಸಿಟ್ಟು ಅವನ ಮೇಲಾ? ಅವಳ ಮೇಲಾ? ವಿಧಿ ಬರಹ ಎಂಥ ಘೋರ?

ಅದು ತುಂಬು ಸಂಸಾರ, ನನಗೆ ನೀನು.. ನಿನಗೆ ನಾನು ಅಂತಿದ್ದ ಕುಟುಂಬವದು. ಇಬ್ಬರು ಮಕ್ಕಳು. ಎಲ್ಲವೂ ಚೆನ್ನಾಗೇ ಇತ್ತು. ಆದ್ರೆ ಅದ್ಯಾರ ಕಣ್ಣು ಆ ಕುಟುಂಬ ಮೇಲೆ ಬಿತ್ತೋ ಏನೋ? ಪ್ರೀತಿ ವಾತ್ಸಲ್ಯ ತುಂಬಿದ್ದ ಆ ಕುಟುಂಬದಲ್ಲಿ ಅನುಮಾನ, ಸೇಡು, ಹತಾಶೆ ಹುಟ್ಟಿಕೊಂಡುಬಿಟ್ಟಿತ್ತು.  ಅದೇ ಸೇಡು ನಾಲ್ವರ ಹೆಣ ಹಾಕಿದೆ. ಅದೂ ಕೂಡ ಒಂದೇ ಕುಟುಂಬದ ಮೂವರನ್ನ. ಅಷ್ಟಕ್ಕೂ ಆ ಕುಟುಂಬದಲ್ಲಿ ಆಗಿದ್ದೇನು? ಅದೇ ಕುಟುಂಬದ ಮೂವರು ಪ್ರಾಣ ಬಿಟ್ಟರು. ಆದ್ರೆ ಉಳಿದ ಒಬ್ಬ ಯಾರು?

First Published Nov 20, 2024, 2:25 PM IST | Last Updated Nov 20, 2024, 2:26 PM IST

ಗಂಡ ಹೆಂಡತಿ ಮತ್ತು ಇಬ್ಬರು ಮುದ್ದಾದ ಮಕ್ಕಳು ಹೇಗೆಲ್ಲಾ ಇರಬಹುದಿತ್ತು. ಆದ್ರೆ ಈ ಮಂಜುನಾಥನಿಗೆ ಅನುಮಾನ ಅನ್ನೋ ದೆವ್ವ ತಲೆಗೆ ಹೊಕ್ಕಿಬಿಟ್ಟಿತ್ತು. ಹೆಂಡತಿ ಮೇಲಿನ ಅನುಮಾನದ ಕಾರಣ ಪ್ರತೀ ನಿತ್ಯ ಜಗಳ. ಸಿಕ್ಕಾಪಟ್ಟೆ ಹೆಂಡತಿಗೆ ಹೊಡೆಯುತ್ತಿದ್ದ. ಇನ್ನೂ ಈ ವಿಚಾರ ತಿಳಿದು ಹೆಂಡತಿ ಸಹೋದರ ಬಾವನಿಗೆ ವಾರ್ನ್​ ಮಾಡಿದ್ದ. ಇದು ಮಂಜುನಾಥನ ಪಿತ್ತ ನೆತ್ತಿಗೇರುವಂತೆ ಮಾಡಿತ್ತು.