ನಕಲಿ ಪಾಸ್ ಪೋರ್ಟ್ ಮೂಲಕ ಶ್ರೀಲಂಕಾ ಪ್ರಜೆಗಳ ಎಂಟ್ರಿ: ಸ್ಫೋಟಕ ಸತ್ಯ ಬಯಲು
ರಾಜ್ಯದಲ್ಲಿ ನಕಲಿ ಪಾಸ್ ಪೋರ್ಟ್ ಗ್ಯಾಂಗ್ ಬೀಡುಬಿಟ್ಟಿದ್ದು, ತನಿಖೆಯ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ .
ರಾಜ್ಯದಲ್ಲಿ ನಕಲಿ ಪಾಸ್ ಪೋರ್ಟ್ ಗ್ಯಾಂಗ್ ಬೇರೂರಿದ್ದು, ಶ್ರೀಲಂಕಾ ಡೀಲ್ ಬಯಲಾಗಿದೆ. ಗ್ಯಾಂಗ್‌ನ ಅಸಲಿ ಕಹಾನಿ ಕಂಡು ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ಆರೋಪಿ ಅಮಿನ್ ಶೇಟ್ ವಿಚಾರಣೆ ವೇಳೆ ಶ್ರೀಲಂಕಾ ಡೀಲ್ ಮಾಹಿತಿ ಲಭ್ಯವಾಗಿದೆ. ಈ ಕುರಿತು ಗುಜರಾತಿನಲ್ಲಿ ಶಿಬು ಎಂಬಾತನನ್ನು ಬಂಧಿಸಲಾಗಿದೆ. ನಕಲಿ ಪಾಸ್ ಪೋರ್ಟ್ ಮೂಲಕ ಭಾರತಕ್ಕೆ ಶ್ರೀಲಂಕಾ ಪ್ರಜೆಗಳ ಎಂಟ್ರಿ ಆಗುತ್ತಿದ್ದು, ನಕಲಿ ಆಧಾರ್, ಮಾರ್ಕ್ಸ್ ಕಾರ್ಡ್ ಸೃಷ್ಠಿಯ ಬಗ್ಗೆ ತನಿಖೆ ವೇಳೆ 23 ನಕಲಿ ಪಾಸ್ ಪೋರ್ಟ್ ಪತ್ತೆಯಾಗಿವೆ. ಸಂಬಂಧ ಪಟ್ಟ ಇಲಾಖೆಗೆ ಕಳುಹಿಸಿದಾಗ ನಕಲಿ ದಾಖಲೆ ಬಯಲಾಗಿದೆ. ವಿದೇಶಕ್ಕೆ ಹೋದವರಿಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದ್ದು, ಭಾರತಕ್ಕೆ ಬಂದ ತಕ್ಷಣ ಅರೆಸ್ಟ್ ಮಾಡಲು ತಯಾರಿ ನಡೆಸಲಾಗಿದೆ.