ಸಂಪಾದಕ ರವಿ ಹೆಗಡೆ ಹೆಸರಲ್ಲಿ ಫೇಸ್‌ಬುಕ್ ಫೇಕ್ ಅಕೌಂಟ್, ಇರಲಿ ಎಚ್ಚರ!
* ಸೆಲೆಬ್ರಿಟಿಗಳು, ಪತ್ರಕರ್ತರು, ಖ್ಯಾತನಾಮರ ಹೆಸರಿನಲ್ಲಿ ನಕಲಿ ಖಾತೆ
* ಫೇಸ್ ಬುಕ್ ಮೂಲಕ ಹಣ ಕೇಳುವ ಖದೀಮರು
* ಕೊರೋನಾ ಸಂಕಷ್ಟದಲ್ಲಿದ್ದೇನೆ ಎಂದು ಸಂದೇಶ ಕಳಿಸುತ್ತಾರೆ
* ಸೋಶಿಯಲ್ ಮೀಡಿಯಾ ಜಮಾನದಲ್ಲಿ ಎಷ್ಟು ಎಚ್ಚರದಿಂದ ಇದ್ದರೂ ಸಾಲದು
ಬೆಂಗಳೂರು(ಮೇ 12) ಆನ್ ಲೈನ್ ವಂಚಕರು ಕೊರೋನಾ ಕಾಲವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಯತ್ನ ಮಾಡುತ್ತಿರುವುದು ಗೊತ್ತಿಲ್ಲದ ವಿಚಾರ ಏನಲ್ಲ. ಸೆಲೆಬ್ರಿಟಿಗಳು, ಸಂಪಾದಕರು, ಖ್ಯಾತನಾಮರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿರುವ ಸಂಗತಿ ಜಗಜ್ಜಾಹೀರಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಅವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿ ಮಾಡಿದ್ದು ಬೆಳಕಿಗೆ ಬಂದಿದೆ.
ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಖಾತೆ ಮಾಡಿಕೊಂಡಿದ್ದರು!
ಕಷ್ಟವಿದೆ, ಅನಿವಾರ್ಯವಿದೆ ಎಂದು ಫೇಸ್ ಬುಕ್ ಮೆಸೇಂಜರ್ ನಲ್ಲಿ ಹಣ ಕೇಳುತ್ತಾರೆ. ದಯವಿಟ್ಟು ಬಳಕೆದಾರರು ಇಂತಹ ವಂಚಕರಿಂದ ಸಾಕಷ್ಟು ಜಾಗೃತರಾಗಿ ಇರಿ. ಖ್ಯಾತನಾಮರಿಂದ ಸಂದೇಶ ಬಂದಿದೆ ಎಂದರೆ ಇನೊಮ್ಮೆ ವಿಚಾರಿಸಿಕೊಳ್ಳಿ..