Asianet Suvarna News Asianet Suvarna News

ಡೀಸಿ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ : ಫ್ರೆಂಡ್ಸ್‌ ರಿಕ್ವೆಸ್ಟ್‌ ಕಳುಹಿಸಿ ಹಣಕ್ಕಾಗಿ ಬೇಡಿಕೆ

ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧಿಕೃತ ಫೇಸ್‌ಬುಕ್‌ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ. ಪರಿಚಿತರಿಗೆ ಮೆಸೆಂಜರ್‌ ಮೂಲಕ ಸಂದೇಶ ಕಳುಹಿಸಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಸಿಕೊಳ್ಳವ ಪ್ರಯತ್ನ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
 

Demands Money in Facebook Fake Account Name of chikkaballapur  DC snr
Author
Bengaluru, First Published Mar 15, 2021, 3:54 PM IST

 ಚಿಕ್ಕಬಳ್ಳಾಪುರ (ಮಾ.15):  ಅಧಿಕಾರಿಗಳ ಹಾಗೂ ಗಣ್ಯ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆಗಳನ್ನು ಸೃಷ್ಟಿಸಿ ಸ್ನೇಹಿತರಿಗೆ ಪೋನ್‌ ಪೇ ಅಥವ ಗೂಗಲ್‌ ಪೇ ಮುಖಾಂತರ ಹಣ ಕಳುಹಿಸುವಂತೆ ಕೋರುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದ್ದು ಇದೀಗ ಅವರ ಸಾಲಿಗೆ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧಿಕೃತ ಫೇಸ್‌ಬುಕ್‌ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ.

ಡಿಸಿ ಚಿಕ್ಕಬಳ್ಳಾಪುರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದ ಆನ್‌ಲೈನ್‌ ಖದೀಮರು, ಪರಿಚಿತರಿಗೆ ಮೆಸೆಂಜರ್‌ ಮೂಲಕ ಸಂದೇಶ ಕಳುಹಿಸಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಸಿಕೊಳ್ಳವ ಪ್ರಯತ್ನ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಡೀಸಿ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿ

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ನೈಜ ಖಾತೆಯಲ್ಲಿನ ಪೋಟೋಗಳನ್ನು, ಪೊ›ಫೈಲ್‌ ಫೋಟೊ ಆಗಿ ಬಳಸಿರುವ ಖದೀಮರು ಮತ್ತೊಂದು ಖಾತೆ ಸೃಷ್ಟಿಸಿದ್ದಾರೆ. ಅವರೊಂದಿಗೆ ಇರುವ ಸ್ನೇಹಿತರಿಗೆ ಫ್ರೆಂಡ್‌ ರಿಕ್ವೆಸ್ವ್‌ ಕಳುಹಿಸಿ ಫ್ರೆಂಡ್‌ ಆಗಿದ್ದಾರೆ. ನಂತರ ಅನುಮಾನ ಬಾರದಂತೆ ಹಣಕ್ಕೆ ಡಿಮ್ಯಾಂಡ್‌ ಮಾಡುತ್ತಿರುವುದು ಕಂಡುಬಂದಿದೆ.

ಬೆಳಗಾವಿ: ಫೇಸ್‌ಬುಕ್‌-ವಾಟ್ಸಾಪ್‌ನಲ್ಲಿ ಪ್ರಚೋದನಕಾರಿ ಪೋಸ್ಟ್‌, 4 ಮಂದಿ ವಿರುದ್ಧ FIR ...

ಪ್ರಕರಣ ದಾಖಲಿಸಿದ ಜಿಲ್ಲಾಧಿಕಾರಿ

ಡೀಸಿ ಚಿಕ್ಕಬಳ್ಳಾಪು ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದಿರುವುದು ತಮಗೆ ಅರಿವು ಆಗುತ್ತಿದ್ದಂತೆ ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಆರ್‌ ಲತಾ , ಡಿಸಿ ಚಿಕ್ಕಬಳ್ಳಾಪುರ ಎಂಬ ಹೆಸರಿನಿಂದ ನಕಲಿ ಫೇಸ್ಬುಕ್‌ ಖಾತೆಯನ್ನು ತೆರೆಯಲಾಗಿದ್ದು, ಫ್ರೆಂಡ್‌ ರಿಕ್ವೆಸ್ವ್‌ ಕಳುಹಿಸಿ, ನಂತರ ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಈ ಬಗ್ಗೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಲ್ಲದೇ ಸಾರ್ವಜನಿಕರು ಯಾವುದೇ ಕಾರಣಕ್ಕೂ ಸದರಿ ಹೆಸರಿನಿಂದ ಬರುವ ಫ್ರೆಂಡ್‌ ರಿಕ್ವೆಸ್ವ್‌ ಅಕ್ಸೆಪ್ಟ್ ಮಾಡಬಾರದು ಹಾಗೂ ಹಣ ವರ್ಗಾವಣೆ ಮಾಡದಂತೆ ಅವರು ಮನವಿ ಮಾಡಿದ್ದಾರೆ.

Follow Us:
Download App:
  • android
  • ios