Asianet Suvarna News Asianet Suvarna News

ಡ್ರಗ್ಸ್‌ ಆಯ್ತು, ಹವಾಲಾ ಕೇಸ್‌ನಲ್ಲಿಯೂ ತಗ್ಲಾಕೋತಾರಾ ರಾಗಿಣಿ, ಸಂಜನಾ?

ಶ್ರೀಲಂಕಾದ ಕ್ಯಾಸಿನೋಗಳಲ್ಲಿ ಅಕ್ರಮ ಹಣ ಹೂಡಿಕೆ ಮಾಡಲಾಗುತ್ತಿದೆ ಎಂದು ಪ್ರಶಾಂತ್ ಸಂಬರಗಿ ಆರೋಪ ಮಾಡಿದ್ದಾರೆ. ಕೊಲಂಬೋದ ಕ್ಯಾಸಿನೋದಲ್ಲಿ ಅಕ್ರಮ ಹಣ ಹೂಡಿಕೆ ಮಾಡಲಾಗಿದೆ ಎನ್ನುವ ಆರೋಪ ಬಗ್ಗೆ ಇಡಿ ವಿಚಾರಣೆಗೆ ಇಳಿದಿದೆ. 

ಬೆಂಗಳೂರು (ಸೆ. 10): ಸ್ಯಾಂಡಲ್‌ವುಡ್ ಡ್ರಗ್ ತನಿಖೆ ಕುತೂಹಲದ ಘಟ್ಟಕ್ಕೆ ತಲುಪಿದೆ. ಡ್ರಗ್ ಕೇಸ್‌ ತನಿಖೆಗೆ ಇಡಿ ಎಂಟ್ರಿಯಾಗಿದೆ. ಸಿಸಿಬಿ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ. ಕಿಂಗ್‌ಪಿನ್‌ ವಿರೇನ್‌ ಖನ್ನಾನನ್ನು ಮೊದಲು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. 

ಡ್ರಗ್ ಮಾಫಿಯಾ ತನಿಖೆ ಚುರುಕು, ಕೋರ್ಟ್‌ ಕದ ತಟ್ಟಿದ ನಲಪಾಡ್; ಟ್ವಿಸ್ಟ್ ಕೊಡ್ತು ಹೇಳಿಕೆ!

ಶ್ರೀಲಂಕಾದ ಕ್ಯಾಸಿನೋಗಳಲ್ಲಿ ಅಕ್ರಮ ಹಣ ಹೂಡಿಕೆ ಮಾಡಲಾಗುತ್ತಿದೆ ಎಂದು ಪ್ರಶಾಂತ್ ಸಂಬರಗಿ ಆರೋಪ ಮಾಡಿದ್ದಾರೆ. ಕೊಲಂಬೋದ ಕ್ಯಾಸಿನೋದಲ್ಲಿ ಜಮೀರ್ ಅಹ್ಮದ್ ಜೊತೆ ಸಂಜನಾ ಕೂಡಾ ಇದ್ದರು ಎಂದಿದ್ದರು. ಸ್ಯಾಂಡಲ್‌ವುಡ್‌ ಸ್ಟಾರ್‌ಗಳು, ನಿರ್ಮಾಪಕರು ಅಕ್ರಮ ಹಣ ಹೂಡಿದ್ದಾರೆ ಎನ್ನಲಾಗುತ್ತಿದೆ.  ಹವಾಲಾ ಹಣದ ಬಗ್ಗೆ ತನಿಖೆಗೆ ಇಡಿ ಅಖಾಡಕ್ಕಿಳಿದಿದೆ.  ಈಗ ಇಡೀ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ವಿಚಾರಣೆ ಯಾವ ರೀತಿ ಸಾಗಬಹುದು? ಏನೆಲ್ಲಾ ಬೆಳವಣಿಗೆಗಳಾಗಬಹುದು? ಇಲ್ಲಿದೆ ನೋಡಿ..!