Asianet Suvarna News Asianet Suvarna News

ಡ್ರಗ್ ಮಾಫಿಯಾ ತನಿಖೆ ಚುರುಕು, ಕೋರ್ಟ್‌ ಕದ ತಟ್ಟಿದ ನಲಪಾಡ್; ಟ್ವಿಸ್ಟ್ ಕೊಡ್ತು ಹೇಳಿಕೆ!

ಡ್ರಗ್ ಮಾಫಿಯಾ ತನಿಖೆ ಚುರುಕಾಗುತ್ತಿದ್ದಂತೆ ಮಹಮ್ಮದ್ ನಲಪಾಡ್ ನ್ಯಾಯಾಲಯದ ಮೊರೆ ಹೋಗಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ನಲಪಾಡ್‌ಗೂ ಭೀತಿ ಶುರುವಾಗಿದೆಯಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಬಗ್ಗೆ ನಲಪಾಡ್ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ಧಾರೆ. 

ಬೆಂಗಳೂರು (ಸೆ. 10): ಡ್ರಗ್ ಮಾಫಿಯಾ ತನಿಖೆ ಚುರುಕಾಗುತ್ತಿದ್ದಂತೆ ಮಹಮ್ಮದ್ ನಲಪಾಡ್ ನ್ಯಾಯಾಲಯದ ಮೊರೆ ಹೋಗಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ನಲಪಾಡ್‌ಗೂ ಭೀತಿ ಶುರುವಾಗಿದೆಯಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಬಗ್ಗೆ ನಲಪಾಡ್ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ಧಾರೆ. 

ಡ್ರಗ್ ಮಾಫಿಯಾ ತನಿಖೆಯಿಂದ 'ಕೈ' ಶಾಸಕರ ಪುತ್ರನಿಗೆ ಶಾಕ್!

'ನನ್ನ ಬಗ್ಗೆ ನೆಗೆಟಿವ್ ಆಗಿ 408 ಆರ್ಟಿಕಲ್‌ಗಳು ಸಿಗುತ್ತವೆ. ಅದು ನಮ್ಮ ಫ್ಯಾಮಿಲಿಗೆ, ನಮ್ಮ ಬ್ಯುಸಿನೆಸ್‌ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಇದನ್ನು ತೆಗೆಯಿರಿ ಎಂದು 15 ದಿನದ ಹಿಂದೆ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಅದಕ್ಕೂ ಡ್ರಗ್, ಮಾಫಿಯಾಗೂ ಸಂಬಂಧ ಇಲ್ಲ. ನಾನು ತನಿಖೆಗೂ ಸಿದ್ಧನಿದ್ಧೇನೆ' ಎಂದು ನಲಪಾಡ್ ಸ್ಪಷ್ಟನೆ ನೀಡಿದ್ಧಾರೆ.