ವರದಕ್ಷಿಣೆಗಾಗಿ ವಿಕೃತಿ, ಪತ್ನಿಯ ತಲೆಮೇಲೆ ಮೂತ್ರ ವಿಸರ್ಜಿಸಿ ಕಿರುಕುಳ!
ಪತಿ ತನ್ನನ್ನು ಅಸಭ್ಯವಾಗಿ ನಡೆಸಿಕೊಂಡಿದ್ದಾನೆ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಡ್ರಗ್ಸ್ ಸೇವಿಸಿ ಆಕೆಯ ತಲೆಯ ಮೇಲೆ ಮೂತ್ರ ವಿಸರ್ಜನೆಯನ್ನೂ ಮಾಡಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬೆಂಗಳೂರು (ಆ.12): ಆಘಾತಕಾರಿ ಘಟನೆಯೊಂದರಲ್ಲಿ, ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಮಾದಕದ್ರವ್ಯದ ಅಮಲಿನಲ್ಲಿ ತನ್ನ ಹೆಂಡತಿಯ ತಲೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಆರೋಪಿ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಆರೋಪಿಯನ್ನು ಸಂದೀಪ್ ಎಂದು ಪೊಲೀಸರು ಗುರುತಿಸಿದ್ದಾರೆ.
ಆರೋಪಿಯ ಪತ್ನಿ ದೂರು ನೀಡಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ, ತೆಲಂಗಾಣದ ಪ್ರಸಿದ್ಧ ಗಾರ್ಮೆಂಟ್ಸ್ ಕಂಪನಿಯ ಮಾಲೀಕರ ಮಗಳಾದ ಮಹಿಳೆ ಕಳೆದ ಜನವರಿಯಲ್ಲಿ ಸಂದೀಪ್ ಅವರನ್ನು ವಿವಾಹವಾಗಿದ್ದರು. ಹೈದರಾಬಾದ್‌ನ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಅದ್ದೂರಿಯಾಗಿ ವಿವಾಹ ನಡೆದಿತ್ತು. ವರದಕ್ಷಿಣೆ ರೂಪದಲ್ಲಿ 4 ಕೆಜಿ ಚಿನ್ನ ಹಾಗೂ ಕೂಪರ್ ಕಾರ್‌ಅನ್ನು ನೀಡಲಾಗಿತ್ತು. ಅದಲ್ಲದೆ, ತೆಲಂಗಾಣದಲ್ಲಿ ಎರಡು ಬಟ್ಟೆ ಮಳಿಗೆಯನ್ನೂ ಆರೋಪಿಗೆ ನೀಡಲಾಗಿತ್ತು ಎಂದು ತಿಳಿಸಲಾಗಿದೆ.
Crime News: ವರದಕ್ಷಿಣೆಗಾಗಿ ಸೊಸೆಯನ್ನು ವಿದ್ಯುತ್ ತಂತಿಗೆ ಕಟ್ಟಿ ಕೊಂದ ಅತ್ತೆ-ಮಾವ
ಮದುವೆಗಾಗಿ ಮಹಿಳೆಯ ಪಾಲಕರು 6 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಆರೋಪಿ ಮಾದಕ ವ್ಯಸನಿ ಎಂಬುದು ಪತ್ತೆಯಾಗಿದೆ. ಮನೆಯಲ್ಲಿ, ಅವರು ತಮ್ಮ ಸಹಚರರೊಂದಿಗೆ ಪಾರ್ಟಿಯನ್ನು ಕೂಡ ಮಾಡಿದ್ದಾರೆ. ಪೊಲೀಸರ ಪ್ರಕಾರ, ಸಂತ್ರಸ್ತೆ ತನ್ನ ಸ್ನೇಹಿತರನ್ನು ಮನೆಗೆ ಕರೆದಿದ್ದನ್ನು ವಿರೋಧಿಸಿದರೆ, ಆರೋಪಿಯು ತನ್ನ ಸಹಚರರ ಮುಂದೆ ಅವಳನ್ನು ಥಳಿಸಿದ ಎಂದು ವರದಿಯಾಗಿದೆ.