ಸಿಲಿಕಾನ್ ಸಿಟಿಯಲ್ಲಿ ಡಬಲ್‌ ಮರ್ಡರ್‌: ವೃತ್ತಿ ವೈಷಮ್ಯಕ್ಕೆ ನಡೆಯಿತಾ ಕೊಲೆ ?

ಬೆಂಗಳೂರಿನ ಅಮೃತಹಳ್ಳಿಯಲ್ಲಿ ಹಾಡಹಗಲೇ ಡಬಲ್‌ ಮರ್ಡರ್‌ ಆಗಿದೆ. ಮಾಜಿ ಉದ್ಯೋಗಿಯೊಬ್ಬ ಏರೋನಿಕ್ಸ್‌ ಕಂಪನಿಯ ಸಿಇಒ ಹಾಗೂ ಎಂಡಿಯನ್ನೇ ಕೊಲೆ ಮಾಡಿದ್ದಾನೆ.
 

Share this Video
  • FB
  • Linkdin
  • Whatsapp

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಹಾಡಹಗಲೇ ಡಬಲ್‌ ಮರ್ಡರ್‌ (Double Murder) ನಡೆದಿದೆ. ಏರೋನಿಕ್ಸ್‌ ಸಂಸ್ಥೆಯ(Aaronics Internet) ಎಂಡಿ, ಸಿಇಒರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಫಣಿಂದ್ರ ಸುಬ್ರಹ್ಮಣ್ಯ ಹಾಗೂ ಮುಖ್ಯ ಕಾರ್ಯನಿರ್ವಹಣೆ ಅಧಿಕಾರಿ ವಿನುಕುಮಾರ್ ಎಂದು ಗುರುತಿಸಲಾಗಿದೆ. ಬೆಂಗಳೂರಿನ (Bengaluru) ಅಮೃತಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಇದೇ ಸಂಸ್ಥೆಯ ಮಾಜಿ ಉದ್ಯೋಗಿ ಫೀಲಿಕ್ಸ್‌ ಈ ಕೊಲೆಯನ್ನು ಮಾಡಿದ್ದಾನೆ. ಬ್ಯೂಜಿನೆಸ್‌ ವಿಚಾರವಾಗಿ ಈ ಜೋಡಿ ಕೊಲೆ(murder) ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಫೀಲಿಕ್ಸ್‌, ವಿನಯ್‌ ರೆಡ್ಡಿ, ಶಿವು ಬಂಧಿತ ಆರೋಪಿಗಳಾಗಿದ್ದಾರೆ. ಫಣಿಂದ್ರ ಹತ್ಯೆ ವೇಳೆ ಅದನ್ನು ತಡೆಯಲು ಬಂದ ವಿನುಕುಮಾರ್‌ರನ್ನು ಕೊಲೆ ಮಾಡಲಾಗಿದೆ. ಕೊಲೆಯಾದವರು ಮತ್ತು ಆರೋಪಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಮೃತಹಳ್ಳಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಫಣಿಂದ್ರ, ವಿನುಕುಮಾರ್ ಮೃತದೇಹಗಳನ್ನು ಮಣಿಪಾಲ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಇದನ್ನೂ ವೀಕ್ಷಿಸಿ: Today Rashibhavishy: ಈ ದಿನ ಭರಣಿ ನಕ್ಷತ್ರವಿದ್ದು, ಶಿವ-ವಿಷ್ಣು ಆರಾಧನೆ ಮಾಡಿ

Related Video