Gadag Crime: B.A.M.S ಡಾಕ್ಟರ್ ಡೆತ್ ನೋಟ್ ಸೀಕ್ರೆಟ್..! ವೈದ್ಯ ಬರೆದ ಡೈರಿಯಲ್ಲಿತ್ತು ಪ್ರಭಾವಿಗಳ ಹೆಸರು..!

B.A.M.S ಡಾಕ್ಟರ್‌ಗೆ ಉಸುಕಿನ ವ್ಯಾಪಾರ..!
ಡಾಕ್ಟರ್ ಶವ ಕುಣಿಕೆಯಲ್ಲಿ ನೇತಾಡ್ತಿತ್ತು..!
ಡೆತ್ ನೋಟ್ನ ಕೊನೇ ಪುಟದಲ್ಲಿತ್ತು ಕಾರಣ..!

Share this Video
  • FB
  • Linkdin
  • Whatsapp

ಆತನದ್ದು ಮುದ್ದಾದ ಸಂಸಾರ. ಜೀವನ ನಡೆಸಲು ವೈದ್ಯವೃತ್ತಿ. ಊರಿನಲ್ಲಿ ದೊಡ್ಡ ಹೆಸರು ಕೂಡ ಇತ್ತು. ಡಾಕ್ಟರ್ ಸಾಹೇಬರು ಅಂದ್ರೆ ಆ ಊರಿನವರಿಗೆ ಬೆಟ್ಟದಷ್ಟು ಗೌರವ. ರಾಜಕೀಯ ಹಿನ್ನೆಲೆ ಇರೋ ಕುಟುಂಬದಿಂದ ಬಂದವರಾಗಿದ್ರಿಂದ ರಾಜಕೀಯ ನಂಟು ಕೂಡ ಇತ್ತು. ಹಣ, ಹೆಸರು ಪೊಲಿಟಿಕಲ್ ಪವರ್ ಇದ್ರೂ ಸೈಡ್ ಬಿಸಿನೆಸ್ ಅಂತಾ ಮರುಳು ವ್ಯಾಪಾರ(Sand business) ಮಾಡೋದಕ್ಕೆ ಆ ವೈದ್ಯ ಮುಂದಾಗಿದ್ರು. ಅದೇ ವ್ಯಾಪಾರ ವ್ಯವಹಾರದ ಟೆನ್ಷನ್ ಅವರನ್ನ ಬಲಿ ಪಡೆದಿದೆ. ವೈದ್ಯರಾಗಿದ್ದ ಶಶಿಧರ್ ಹಟ್ಟಿಯವ್ರು ಮರಳು ವ್ಯಾಪಾರಕ್ಕೆ ಕೈ ಹಾಕ್ತಾರೆ. ಆದ್ರೆ ತನ್ನ ಪಾಟ್ನರ್ನಿಂದ ಒತ್ತಡ ಹೆಚ್ಚಾಗುತ್ತಲೇ ಡೆತ್ನೋಟ್(DeatNote) ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ(Suicide) ಶರಣಾದ ಡಾಕ್ಟರ್ ಶಶಿಧರ್ ತಮ್ಮ ಸಾವಿಗೆ ಧನದಾಹಿ ಶರಣಗೌಡರೇ ಕಾರಣ ಅಂತ ಬರೆದಿದ್ದಾರೆ. ಶಶಿಧರ್ ವ್ಯಾಪಾರ, ವೈದ್ಯಕೀಯ ವೃತ್ತಿ ಜೊತೆಗೆ ಮುದ್ದಾದ ಕುಟುಂಬ ಹೊಂದಿದ್ರು. ಸಾಯೋದಕ್ಕೂ ಮುನ್ನ ಶಶಿಧರ್ ತಮ್ಮ ಮಕ್ಕಳ ಬಗ್ಗೆ ಯೋಚ್ನೆ ಮಾಡ್ಬೇಕಿತ್ತು. ವ್ಯಾಪಾರ ವ್ಯವಹಾರದ ಆಚೆ ಏನೂ ಅರಿಯದ ಮಕ್ಕಳು ತಂದೆ ಪ್ರೀತಿಯಿಂದ ವಂಚಿತವಾಗುವಂತಾಗಿದೆ, ಜೀವನದಲ್ಲಿ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರ ಅಲ್ಲ.

ಇದನ್ನೂ ವೀಕ್ಷಿಸಿ: Karnataka Budget : ಅತಿ ಹೆಚ್ಚು ಸಾಲ ಮಾಡಿರುವುದೇ ಸಿದ್ದರಾಮಯ್ಯ ಬಜೆಟ್ ದಾಖಲೆ: ಬಸವರಾಜ ಬೊಮ್ಮಾಯಿ

Related Video