
ಅಂದು ಗೊತ್ತು ಅಂದರು, ಇಂದು ಇಲ್ಲ ಎಂದ್ರು.. ಏನ್ ಕತೆ!
ಸಿಡಿ ಸ್ಫೋಟ ಪ್ರಕರಣ ಮುಗಿಯಲ್ಲ/ ಮತ್ತೊಂದು ತಿರುವು/ ಯುವತಿ ಗೊತ್ತೇ ಇಲ್ಲ ಎಂದ ಡಿಕೆಶಿ/ ಯುವತಿಯಿಂದ ಮತ್ತೊಂದು ವಿಡಿಯೋ/ ನನ್ನ ಪೋಷಕರಿಗೆ ಬೆದರಿಕೆ ಹಾಕಿ ಹೇಳಿಕೆ ಪಡೆದುಕೊಳ್ಳಲಾಗಿದೆ.
ಬೆಂಗಳೂರು, (ಮಾ.27): ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಅವರು ಆ ಮಹಾನ್ ನಾಯಕ ಡಿಕೆ ಶಿವಕುಮಾರ್ ಎಂದು ನೇರವಾಗಿ ಆರೋಪ ಮಾಡಿದ್ದಾರೆ. ಇನ್ನು ಈ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.
ಸಿಡಿ ಸ್ಟೋಟದ ಹಿಂದೆ ಬಿಜೆಪಿ ನಾಯಕರ ಕೈವಾಡ? ರಮೇಶ್ ಕೊಟ್ಟ ಸುಳಿವು
ಹಿಂದೊಮ್ಮೆ ಅನ್ಯಾಯಕ್ಕೆ ಒಳಗಾಗಿದ್ದ ಯುವತಿ ನನ್ನ ಬಳಿ ಬಂದಿದ್ದರು ಎಂದಿದ್ದ ಡಿಕೆಶಿ ಈಗ ಮಾತಿನ ವರಸೆ ಬದಲಿಸಿದ್ದದಾರೆ. ಪ್ರಕರಣ ಒಂದಾದ ಮೇಲೆ ಒಂದು ತಿರುವು ಪಡೆದುಕೊಂಡಿದೆ.