Asianet Suvarna News Asianet Suvarna News

'ಕೈ'ಲಾಗದ ನಾಯಕರು, ರಕ್ಷಣೆಗೆ ಬಿಜೆಪಿ ಮುಖಂಡರ ಮೊರೆ ಹೋಗಿದ್ದ ಸಂಪತ್‌ ರಾಜ್?

ಸಂಪತ್ ರಾಜ್ ಬಂಧನದ ಬೆನ್ನಲ್ಲೇ ಬೆಂಗಳೂರು ಬೆಂಕಿ ತನಿಖೆ ಚುರುಕುಗೊಂಡಿದೆ. ಈ ಕೇಸ್‌ನಿಂದ ತಪ್ಪಿಸಿಕೊಳ್ಳಲು ಸಂಪತ್ ರಾಜ್ ಮಾಡಿದ ಪ್ಲಾನ್ ಒಂದೆರಡಲ್ಲ. ಒಂದು ತಿಂಗಳುಗಳ ಕಾಲ ನಾಪತ್ತೆಯಾಗಿದ್ದರು. 

Nov 18, 2020, 11:00 AM IST

ಬೆಂಗಳೂರು (ನ. 18): ಸಂಪತ್ ರಾಜ್ ಬಂಧನದ ಬೆನ್ನಲ್ಲೇ ಬೆಂಗಳೂರು ಬೆಂಕಿ ತನಿಖೆ ಚುರುಕುಗೊಂಡಿದೆ. ಈ ಕೇಸ್‌ನಿಂದ ತಪ್ಪಿಸಿಕೊಳ್ಳಲು ಸಂಪತ್ ರಾಜ್ ಮಾಡಿದ ಪ್ಲಾನ್ ಒಂದೆರಡಲ್ಲ. ಒಂದು ತಿಂಗಳುಗಳ ಕಾಲ ನಾಪತ್ತೆಯಾಗಿದ್ದರು. 

ಇಂದು ಬಿಎಸ್‌ವೈ ಸಂಪುಟದ ಕೆಲ ಸಚಿವರಿಗೆ ಕೊನೆಯ ಕ್ಯಾಬಿನೆಟ್ ಸಭೆ?

ರಾಜಕೀಯ ಪ್ರಭಾವ, ಹಣದ ಪ್ರಭಾವ ಎರಡನ್ನೂ ಬಳಸಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಕೈ ನಾಯಕರಿಂದ ಆಗಲ್ಲ ಅಂತಾದಾಗ ಬಿಜೆಪಿ ನಾಯಕರ ಮೊರೆ ಹೋಗಿದ್ದರು. ಪೊಲೀಸ್ ಅಧಿಕಾರಿಇ ಮೂಲಕ ಸಿಸಿಬಿಗೆ ಒತ್ತಡವನ್ನೂ ಹಾಕಿಸಿದ್ದರು. ಕೋವಿಡ್‌ ನೆಪ ಹೇಳಿ ಆಸ್ಪತ್ರೆ ಸೇರಿದ್ದ ಸಂಪತ್ ರಾಜ್ ಅಲ್ಲಿಂದ ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆಗಿದ್ದರು. ತಮಿಳುನಾಡು, ಕೇರಳ ಅಂತ ಸುತ್ತಾಡ ನಡೆಸುತ್ತಿದ್ದರು.  ಕೊನೆಗೂ ಬಂಧನವಾಗಿದ್ದು, ಇದೀಗ ತನಿಖೆ ಚುರುಕುಗೊಂಡಿದೆ.