ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ವಂಚನೆ ಪ್ರಕರಣ: ತನಿಖೆ ಬಳಿಕ ಹಿಂದಿನ ಎಂಡಿ ಬಂಧಿಸಿದ ಸಿಐಡಿ
ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ವಂಚನೆ ಪ್ರಕರಣ
ಕಾಮಗಾರಿ ನಡೆಯದ್ದನ್ನ ಖಚಿತಪಡಿಸಿಕೊಂಡ ಸಿಐಡಿ
ಹಣ ಲೂಟಿ ಹೊಡೆದಿರುವುದು ಮೇಲ್ನೋಟಕ್ಕೆ ಸಾಬೀತು
ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ವಂಚನೆ ಪ್ರಕರಣದ(Devaraj Aras Truck Terminal case) ತನಿಖೆಯ ಬಳಿಕ ಹಿಂದಿನ ಎಂಡಿಯನ್ನ ಸಿಐಡಿ(CID) ಪೊಲೀಸರು ಬಂಧಿಸಿದ್ದಾರೆ. ಇದು ಸುವರ್ಣ ನ್ಯೂಸ್ ಕವರ್ ಸ್ಟೋರಿ ಬಿಗ್ ಇಂಪ್ಯಾಕ್ಟ್(Suvarna News Cover Story Big Impact) ಆಗಿದೆ. ಕಾಮಗಾರಿ ನಡೆಸದೇ ಹಣ ಲೂಟಿ ಹೊಡೆದಿದ್ದ ಹಗರಣ ಇದಾಗಿದೆ. 48 ಕೋಟಿ ರೂಗಳ ನಕಲಿ ಕಾಮಗಾರಿ ಮಾಡಿ ಹಣ ಲೂಟಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಹಗರಣದ ಸಂಪೂರ್ಣ ವರದಿಯನ್ನು ಕವರ್ ಸ್ಟೋರಿ ತಂಡ ಮಾಡಿತ್ತು. ವರದಿ ಅನ್ವಯ ವಿಲ್ಸನ್ ಗಾರ್ಡನ್ ಠಾಣೆಗೆ ಎಂಡಿ ಶಿವಪ್ರಕಾಶ್ ದೂರು ನೀಡಿದ್ದು, ಹಗರಣ ಪ್ರಕರಣವನ್ನ ಸರ್ಕಾರ ಸಿಐಡಿಗೆ ಹಸ್ತಾಂತರಿಸಿತ್ತು. ತನಿಖೆಯ ಬಳಿಕ ಹಿಂದಿನ ಎಂಡಿ ಎಸ್. ಶಂಕರಪ್ಪನನ್ನು ಬಂಧಿಸಲಾಗಿದೆ. 2021 ಮತ್ತು 2022 ರ ಅವಧಿಯಲ್ಲಿ ಎಂಡಿಯಾಗಿದ್ದ ಎಸ್ ಶಂಕರಪ್ಪ, ಕಾಮಗಾರಿ ಮಾಡದೇ 802 ಫೈಲ್ ಸೃಷ್ಟಿಸಿದ್ದ ಆರೋಪ ಕೇಳಿಬಂದಿದೆ. ಹಿಂದಿನ ಅಧ್ಯಕ್ಷ ಡಿ ಎಸ್ ವೀರಯ್ಯ ಅವಧಿಯಲ್ಲಿ ನಡೆದಿದ್ದ ಹಗರಣ ಇದಾಗಿದೆ. ಮೂರು ನಕಲಿ ಕಂಪನಿಗಳನ್ನ ಸೃಷ್ಟಿಸಿ ಅಧಿಕಾರಿಗಳು ಹಣ ದೋಚಿದ್ದರು. ಗುತ್ತಿಗೆದಾರರ ಅಕೌಂಟ್‌ಗಳಿಂದ ಅಧಿಕಾರಿಗಳಿಗೆ ಹಣ ವರ್ಗಾವಣೆ ಮಾಡಲಾಗಿತ್ತು. ಸಿಐಡಿ ಡಿವೈಎಸ್ಪಿ ಉದಯ್ ಭಾಸ್ಕರ್ ನೇತೃತ್ವದಲ್ಲಿ ಬಂಧನ ಮಾಡಲಾಗಿದ್ದು, ಶಂಕರಪ್ಪ ಬಂಧಿಸಿ ಮೆಡಿಕಲ್ ಟೆಸ್ಟ್‌ಗೆ ಸಿಐಡಿ ಹಾಜರುಪಡಿಸಿದೆ.
ಇದನ್ನೂ ವೀಕ್ಷಿಸಿ: ಬೀಜಗಳ ಬೆಲೆ ಏರಿಕೆ! ತತ್ತರಿಸಿ ಹೋಗುತ್ತಿದ್ದಾನೆ ಅನ್ನದಾತ ..ರೈತರಿಗೆ ಗಾಯದ ಮೇಲೆ ಬರೆ ಎಳಿತಾ ಸರ್ಕಾರ?