
ಅಪ್ಪ ಮಾಡಿದ್ದು ಅದೊಂದು ತಪ್ಪು: ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಅಮಾಯಕ ವಿದ್ಯಾರ್ಥಿನಿ ಬಲಿ!
ದಾವಣಗೆರೆಯಲ್ಲಿನ ವಿದ್ಯಾರ್ಥಿಯೊಬ್ಬಳು ಪಾಗಲ್ ಪ್ರೇಮಿಯ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಈ ಕುರಿತಾಧ ರಿಪೋರ್ಟ್ ಒಲ್ಲಿದೆ ನೋಡಿ
ದಾವಣಗೆರೆ: ಅದೊಂದು ಚಿಕ್ಕ ಕುಟುಂಬ. ಗಂಡ ಹೆಂಡತಿ ಮತ್ತು ಇಬ್ಬರು ಹೆಣ್ಣುಮಕ್ಕಳು. ಮೊದಲ ಮಗಳು ಎಂ.ಎ ಓದುತ್ತಿದ್ರೆ ಎರಡನೇ ಮಗಳು ಬಿಎಸ್ಸಿ ಮೊದಲ ವರ್ಷ ಓದುತ್ತಿದ್ದಳು. ಮದ್ಯಮ ವರ್ಗದ ಕುಟುಂಬವದು. ಆವತ್ತು ಕಾಲೇಜಿಗೆ ಅಂತ ಹೋದ ಎರಡನೇ ಮಗಳು ಕಾಲೇಜಿನ ಬಿಲ್ಡಿಂಗ್ ಮೇಲಿಂದ ಹಾರಿ ಪ್ರಾಣ ಬಿಟ್ಟಿದ್ದಳು. ಕಾಲೇಜಿನವರೇ ಆಕೆಯನ್ನ ಆಸ್ಪತ್ರೆಗೆ ಸೇರಿಸಿದರಾದ್ರೂ ಆಕೆ ಬದುಕುಳಿದಿರಲಿಲ್ಲ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇನ್ನೂ ಯಾವಾಗ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಳೋ ಪೊಲೀಸರು ಎಂಟ್ರಿಯಾದ್ರು. ಯುವತಿಯ ಸಾವಿಗೆ ಕಾರಣ ತಿಳಿದುಕೊಳ್ಳಲು ಮುಂದಾದ್ರು. ಆಗಲೇ ನೋಡಿ ಅಲ್ಲೊಂದು ಲವ್ ಸ್ಟೋರಿ ತೆರೆದುಕೊಳ್ಳೋದು. ಹಾಗಾದ್ರೆ ಆ ವಿದ್ಯಾರ್ಥಿನಿ ಸಾವಿಗೆ ಕಾರಣವಾದ ಆ ಲವ್ ಕಹಾನಿ ಎನು? ಆವತ್ತು ಕಾಲೇಜಿನಲ್ಲಿ ಏನಾಯ್ತು ಅನ್ನೋದನ್ನ ತಿಳಿದುಕೊಳ್ಳೋಣ ಬನ್ನಿ