ಸೂಟು ಬೂಟಲ್ಲಿ ಬರ್ತಾರೆ.. ಲೂಟಿ ಮಾಡಿ ಹೋಗ್ತಾರೆ..! ಬೆಚ್ಚಿಬೀಳಿಸುತ್ತೆ ಲೂಟಿ ಗ್ಯಾಂಗಿನ ಬ್ಯಾಕ್‌ಗ್ರೌಂಡ್‌!

ಇದು ಕ್ರಿಮಿನಲ್‌ ಟ್ರೇನಿಂಗ್‌ ಸ್ಕೂಲ್‌. ವರ್ಷಕ್ಕೆ 2 ಲಕ್ಷ ಫೀಸ್‌ ಕಟ್ಟಿ ಇಲ್ಲಿನ ಪೋಷಕರೇ ಮಕ್ಕಳಿಗೆ ರಾಬರಿ ಸ್ಕೂಲ್‌ಗೆ ಸೇರಿಸ್ತಾರೆ. ಮಧ್ಯಪ್ರದೇಶದ ಮೂರು ಹಳ್ಳಿಗಳಲ್ಲಿದೆ ಈ ಭಯಾನಕ ಶಾಲೆಗಳು.
 

First Published Aug 24, 2024, 4:58 PM IST | Last Updated Aug 24, 2024, 4:59 PM IST

ಬೆಂಗಳೂರು (ಆ.24): ನಮಗೂ ನಿಮಗೂ ಇಲ್ಲಿ ತನಕ ಇಂಜಿನಿಯರಿಂಗು, ಡಾಕ್ಟ್ರು ಮಾಡೋ ಕಾಲೇಜು ಗೊತ್ತಿತ್ತು.. ನಾವು ಆರ್ಟ್ಸ್ ಅಂತ ತಿಳ್ಕೊಂಡಿರೋ ವಿಚಾರಗಳಲ್ಲಿ ಸ್ಪೆಷಲ್ ಕೋರ್ಸ್ ಕೊಟ್ಟು, ಗ್ರಾಜುಯೇಟ್ ಮಾಡೋ ಕಾಲೇಜೂ ಗೊತ್ತಿತ್ತು.. ಭಾಷೆ ಕಲಿಸೋಕ್ಕೊಂದು, ಶಾಸ್ತ್ರ ಕಲಿಸೋಕ್ಕೊಂದು, ತಂತ್ರಕ್ಕೊಂದು, ಮಂತ್ರಕ್ಕೊಂದು ಅಂತ ನೂರಾರು ಸ್ಕೂಲು ಕಾಲೇಜುಗಳಿದಾವೆ.. ಆದ್ರೆ, ನಾವಿವತ್ತು ನೀವ್ಯಾರೂ ನೋಡೇ ಇರದ, ಕೇಳೇ ಇರದ ಸ್ಕೂಲಿಗೆ ಕರ್ಕೊಂಡ್ ಹೋಗ್ತೀವಿ.. ಅದು, ಸ್ಕೂಲ್ ಆಫ್ ಕ್ರಿಮಿನಲ್ಸ್.. ಅದರ ಸ್ಪೆಷಾಲಿಟಿ ಏನೇನು ಗೊತ್ತಾ..?

ಕಡಿಯಾ, ಗುಲ್ಖೇಡಿ, ಹುಲ್ಖೇಡಿ.. ಇವು ಬರೀ ಹಳ್ಳಿಗಳಲ್ಲ.. ಹಲವಾರು ಜನರ ಪಾಲಿಗೆ, ಹಾರ್ವರ್ಡ್, ಆಕ್ಸ್ಫರ್ಡ್ ಗಿಂತಲೂ ಇವೇ  ಹೆಚ್ಚು.. ಯಾಕಂದ್ರೆ, ಜಗತ್ತಲ್ಲೇ ಎಲ್ಲೂ ಹೇಳಿಕೊಡದ ವಿದ್ಯೆನಾ, ಇಲ್ಲಿ ಹುಡುಗರಿಗೆ ಧಾರೆ ಎರೀತಿದಾರೆ.

ಕನ್ವರ್‌ ಯಾತ್ರೆ ನೇಮ್‌ಪ್ಲೇಟ್‌ ಆರ್ಡರ್‌, ಮೂರು ರಾಜ್ಯಗಳಿಗೆ ನೋಟಿಸ್‌ ನೀಡಿದ ಸುಪ್ರೀಂ ಕೋರ್ಟ್‌!

ಆ ಮೂರು ಹಳ್ಳಿಗಳ ಹೆಸರು ಕೇಳಿದ್ರೆ, ಅಲ್ಲಿನ ಪೊಲೀಸರ ಹಣೆ ಮೇಲೂ ಬೆವರು ಮೂಡುತ್ತೆ.. ಅಕ್ಕಪಕ್ಕದ ಊರಿನ ಜನರಿಗೆ ನಿದ್ದೆಯೇ ಮಾಯವಾಗುತ್ತೆ.. ಆದ್ರೆ, ಆ ಊರಲ್ಲಿ ತಮ್ಮ ಮಕ್ಕಳು ಓದ್ಬೇಕು ಅಂತ ಹಠಕ್ಕೆ ಬಿದ್ದ ತಂದೆತಾಯಂದಿರೂ ಇದಾರೆ..