Asianet Suvarna News Asianet Suvarna News

ಸಚಿವೆ ಶಶಿಕಲಾ ಜೊಲ್ಲೆ ಬ್ಯಾಂಕ್‌ಗೆ ಕನ್ನ: ಖದೀಮರು ಸಿಕ್ಕಿದ್ದು ರೋಚಕ

ಸಚಿವೆ ಶಶಿಕಲಾ ಜೊಲ್ಲೆ ಒಡೆತನದ ಬ್ಯಾಂಕ್'ನ ಧಾರವಾಡದ ಶಾಖೆಯಲ್ಲಿ ದರೋಡೆ ಆಗಿತ್ತು. ಕೊನೆಗೂ ಖದೀಮರು ಸಿಕ್ಕಿ ಬಿದ್ದಿದ್ದಾರೆ.

ಅದು ನಮ್ಮ ಕರ್ನಾಟಕ ಸರ್ಕಾರ ಸಚಿವೆ ಶಶಿಕಲಾ ಜೊಲ್ಲೆ ಒಡೆತನದ ಕೋ-ಒಪರೇಟೀವ್ ಬ್ಯಾಂಕ್. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ 120ಕ್ಕೂ ಹೆಚ್ಚು ಬ್ರಾಂಚ್ ಹೊಂದಿರುವ ಬ್ಯಾಂಕ್ ಅದು. ಇಂಥಹ ಬ್ಯಾಂಕ್'ನ ಬ್ರಾಂಚ್ ಒಂದರಲ್ಲಿ ಅವತ್ತೊಂದು ದಿನ ಕಳ್ಳತನವಾಗಿಬಿಡುತ್ತೆ. ಕದ್ದ ಕಳ್ಳರು ಬೆಲೆಬಾಳುವ ಒಡೆವೆಗಳನ್ನು, ಲಕ್ಷ-ಲಕ್ಷ ಕ್ಯಾಶ್'ನ್ನು ಕದ್ದು ಕೊಂಡೊಯ್ದುಬಿಡ್ತಾರೆ. ಆ ಸೀನ್ ಆಫ್ ಕ್ರೈಂ ನೋಡ್ತಿದ್ರೆ ಇದೊಂದು ಪಕ್ಕಾ ಪ್ರೊಫೆಷನಲ್ ಕಳ್ಳರೇ ಮಾಡಿರೋದು ಅಂತ ಅನಿಸುವುದು ಸುಳ್ಳಲ್ಲ. ಆದ್ರೆ ಇದೇ ಕೇಸ್'ನ ಬೆನ್ನುಬಿದ್ದ ಪೊಲೀಸರಿಗೆ ದಿನಕ್ಕೊಂದು ಟ್ವಿಸ್ಟ್. ಇದೊಂದು ಕೇಸ್ನಲ್ಲಿ ಕಳ್ಳರು ಒಂದೇ ಒಂದು ಕ್ಲೂ ಕೂಡ ಬಿಟ್ಟು ಹೋಗಿರಲಿಲ್ಲ. ಆದ್ರೆ ಇದೇ ಕೇಸ್'ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಪೊಲೀಸರಿಗೆ ಬರೊಬ್ಬರಿ 30 ದಿನಗಳ ಬಳಿಕ ಒಂದು ಕ್ಲೂ ಸಿಕ್ಕಿದೆ. ಖತರ್ನಾಕ್ ಕಳ್ಳರ ಹೆಡೆಮುರಿ ಕಟ್ಟಿದ ರೋಚಕ ಕಥೆಯ ಬಗ್ಗೆ ಇಲ್ಲಿದೆ ಡಿಟೇಲ್ಸ್.

Video Top Stories