ಬಾಮೈದುನನ ಲವ್ ಸ್ಟೋರಿಗೆ ಎಂಟ್ರಿ ಆಗಿದ್ದಕ್ಕೇ ಮರ್ಡರ್? ತನಿಖೆಯಲ್ಲಿ ಬಯಲಾಗಿತ್ತು ಅಸಲಿ ಸತ್ಯ!

ಅವನೊಬ್ಬ ರೌಡಿ ಶೀಟರ್... ಇಡೀ ಏರಿಯಾದಲ್ಲೇ ಇವನ ಹವಾ ಜೋರಾಗಿತ್ತು. ಆತ ಫೀಲ್ಡ್ ಗೆ ಇಳಿದ್ರೆ ವಿಕೆಟ್ ಬೀಳೋದು ಗ್ಯಾರೆಂಟಿ. ಅಷ್ಟರ ಮಟ್ಟಿಗೆ ರೌಡಿಸಂನಲ್ಲಿ ಖದರ್ ಉಳಿಸಿಕೊಂಡಿದ್ದ. ಆದ್ರೆ ಲಾಂಗ್ ಹಿಡಿದೋರು ಅದರಲ್ಲೇ ಮಣ್ಣಾಗ್ತಾರೆ ಅನ್ನೋ ಮಾತಿದೆ. ಈ ರೌಡಿನೂ ಅಷ್ಟೇ ಅದೇ ಲಾಂಗ್ನಿಂದ ಮರ್ಡರ್ ಅಗಿಬಿಟ್ಟ. ಆದ್ರೆ ಈತನ ಅಂತ್ಯಕ್ಕೆ ಕಾರಣವಾಗಿದ್ದು ಒಂದು ಲವ್ ಸ್ಟೋರಿ.

Share this Video
  • FB
  • Linkdin
  • Whatsapp

ಬೆಂಗಳೂರು (ಮೇ.4): ಅವತ್ತು ಮಹೇಂದ್ರನನ್ನ (mahendra) ಮುಗಿಸಲೇ ಬೇಕು ಅಂತ ಆ ಟೀಂ ನಿರ್ಧರಿಸಿತ್ತು, ಅದರಂತೆ ಅವನನ್ನ ಕ್ಲೀನಾಗಿ ಫಿನಿಶ್ ಮಾಡಿ ಪೊಲೀಸರೆದುರು (Police) ನಿಂತಿದ್ರು. ಆದ್ರೆ ಮಹೇಂದ್ರ ನಿಜಕ್ಕೂ ಕೊಲೆಯಾಗಿದ್ದು ಯಾವ ಕಾರಣಕ್ಕೆ..? ಅಂತ ಹುಡುಕಿದ್ರೆ ಸಿಕ್ಕಿದ್ದು ಒಂದು ಲವ್ ಕಹಾನಿ.

ಆಂಜನೇಯ ದೇವಸ್ಥಾನದ (Anjaneya Temple) ಎದುರು ಬರ್ಬರವಾಗಿ ಕೊಲೆ ಮಾಡಿದ್ದ ಗ್ಯಾಂಗ್ ಈಗ ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಆದ್ರೆ ಯಾಕೀಗೆ ಮಾಡಿದ್ರು ಅಂತ ಮಹೇಂದ್ರನ ಫ್ಯಾಮಿಲಿಯವರನ್ನ ಕೇಳಿದ್ರೆ ಅವರು ಹೇಳಿದ್ದು ಒಂದು ಲವ್ ಸ್ಟೋರಿಯನ್ನ. ಅವತ್ತು ಮಹೇಂದ್ರ ತನ್ನ ಬಾಮೈದನ ಪ್ರೀತಿಯ ವಿಷ್ಯಕ್ಕೆ ಮಾಡಿಕೊಂಡ ಒಂದು ತಕರಾರಿನಿಂದ ಇವತ್ತು ಅವನ ಮೇಲೆ ಅಟ್ಯಾಕ್ ಆಗಿತ್ತು ಅಂತ ಹೇಳ್ತಿದ್ದಾರೆ.

3 ವರ್ಷಗಳ ಹಿಂದಿನ ಸೇಡು, ಎಮ್ಮೆಕೆರೆ ಗ್ರೌಂಡ್‌ನಲ್ಲಿ ಶತೃಗಳಿಂದ ರೌಡಿಶೀಟರ್ ಲಾಕ್, ಸಿನಿಮೀಯ ಮರ್ಡರ್

ಮಹೆಂದ್ರ ಒಳ್ಳೆಯವನ್ನಾಗಿ ಬದುಕೋ ಮನಸ್ಸು ಮಾಡಿದ್ನಾ ಇಲ್ವಾ ಅನ್ನೋದು ಆ ದೇವರಿಗೇ ಗೊತ್ತು. ಆದ್ರೆ ಪ್ರೀತಿಯ ವಿಷ್ಯಕ್ಕೇ ಮರ್ಡರ್ ಅಗಿದೆ ಅಂತ ಮಹೇಂದ್ರ ಫ್ಯಾಮಿಲಿ ಹೇಳ್ತಿದೆ. ಆದ್ರೆ ತನಿಖೆ ನಡೆಸುತ್ತಿರುವ ಪೊಲೀಸರು ಹೇಳ್ತಿರೋದೇ ಬೇರೆ. ಅಷ್ಟಕ್ಕೂ ತನಿಖೆ ನಡೆಸುತ್ತಿರೋ ಪೊಲೀಸರು ಹೇಳಿದ್ದೇನು..? 

Related Video