Asianet Suvarna News Asianet Suvarna News

ರಾಯಚೂರು; ಆತ್ಮಹತ್ಯೆಗೆ ಪ್ರೇಮಿಗಳು ಶರಣು, ಇಬ್ಬರಿಗೂ ಮದುವೆಯಾಗಿತ್ತು!

ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು/ ಇನ್ನರಿಗೂ ವಿವಾಹವಾಗಿತ್ತು/  ಘಟನೆಗೆ ಸ್ಪಷ್ಟ ಕಾರಣ ಗೊತ್ತಿಲ್ಲ/ ರಾಯಚೂರಿನ ದೇವದುರ್ಗದ ಪ್ರಕರಣ

ರಾಯಚೂರು(ಜ. 28) ಪ್ರೇಮಿಗಳಿಬ್ಬರು ವೈಮನಸ್ಸು ಉಂಟಾಗಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾ. ಹೇಮನಾಳ ಗ್ರಾಮದಲ್ಲಿ ನಡೆದಿದೆ. ರಂಗಣ್ಣ ನಾಯಕ್ ( 30), ರಂಗಮ್ಮ (18) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು.

ಮದುವೆಯಾಗಿ ಆರು ವರ್ಷವಾದರೂ ರಂಗಣ್ಣ ನಾಯಕ್ ಗೆ ಮಕ್ಕಳಾಗಿರಲಿಲ್ಲ.  ರಂಗಣ್ಣ ಚಪ್ಪರ ಗುಂಡಿ ಮಸೀದಿ ಗ್ರಾಮದ ರಂಗಮ್ಮ ಜೊತೆ ಸಂಬಂಧ ಬೆಳೆಸಿದ್ದ ಎನ್ನಲಾಗಿದೆ. ತವರುಮನೆಯಲ್ಲಿ  ರಂಗಮ್ಮ ಉಳಿದುಕೊಂಡಿದ್ದಳು. 

ಹನಿಟ್ರ್ಯಾಪ್‌ ಗೆ ಇಳಿದಿದ್ದ ಖಾಸಗಿ ಚಾನಲ್

ಜಾತ್ರೆಯ ನಿಮಿತ್ತ ರಂಗಣ್ಣನ ಪತ್ನಿ ಶಿವಮ್ಮ ತನ್ನ ತವರುಮನೆ ಕೊತ್ತದೊಡ್ಡಿ ಗ್ರಾಮಕ್ಕೆ ಹೋಗಿದ್ದಳು. ಈ ವೇಳೆ ರಂಗಣ್ಣನ ಮನೆಗೆ ರಂಗಮ್ಮ ಬಂದಿದ್ದಾಳೆ.  ಆದರೆ ಈ ವೇಳೆ ಪ್ರೇಮಿಗಳ ಮಧ್ಯೆ ವೈಮನಸ್ಸು ಉಂಟಾಗಿ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಮೃತನ ಪತ್ನಿ ಶಿವಮ್ಮಳ ಹೇಳಿಕೆ ಆಧಾರದ ಮೇಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Video Top Stories