ಅಕ್ರಮವಾಗಿ ಪೆಂಗೋಲಿಯನ್ ಚಿಪ್ಪು ಸಾಗಾಟ: 25 ಲಕ್ಷ ಬೆಲೆ ಬಾಳುವ ಚಿಪ್ಪು ವಶ
ಅಕ್ರಮವಾಗಿ ಪೆಂಗೋಲಿಯನ್ ಚಿಪ್ಪು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.
ಪೆಂಗೋಲಿಯನ್ ಚಿಪ್ಪು ಸಾಗಾಟ ಮಾಡುತ್ತಿದ್ದ ಕಿರಣ್ ಎಂಬಾತನನ್ನು ಬಂಧಿಸಲಾಗಿದ್ದು, 30 ಕೆ.ಜಿ ಪೆಂಗೋಲಿಯನ್ ಚಿಪ್ಪು ವಶಕ್ಕೆ ಪಡೆಯಲಾಗಿದೆ. ಔಷಧಿ ಹಾಗೂ ಅಲಂಕಾರಿಕ ವಸ್ತುಗಳಿಗೆ ಈ ಪೆಂಗೋಲಿಯನ್ ಚಿಪ್ಪು ಬಳಸಲಾಗುತ್ತೆ. ಒಂದು ಕೆಜಿ ಪೆಂಗೋಲಿಯನ್ ಚಿಪ್ಪು 80 ಸಾವಿರ ಬೆಲೆ ಬಾಳುತ್ತೆ. ಆರೋಪಿ ಕಿರಣ್ ಬಳಿ 25 ಲಕ್ಷ ಬೆಲೆ ಬಾಳುವ 30 ಕೆಜಿ ಚಿಪ್ಪನ್ನು ವಶಕ್ಕೆ ಪಡೆಯಲಾಗಿದೆ. ವಿದೇಶದಲ್ಲಿ ಇದಕ್ಕೆ ವಿಪರೀತ ಡಿಮಾಂಡ್ ಇದ್ದು, ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ.