ಬೈಕ್ ಕಳ್ಳ 'ಹೈ ಪ್ರೊಫೈಲ್ ಪಿಂಪ್' ಆಗಿದ್ದು ಹೇಗೆ?: ಇದು ಸ್ಯಾಂಟ್ರೋ ರವಿ ಅಸಲಿ ಕಹಾನಿ

ಸ್ಯಾಂಟ್ರೋ ರವಿ ಒಬ್ಬ ತಲೆಹಿಡುಕ, ಬೈಕ್  ಹಾಗೂ ಕಾರುಗಳನ್ನು ಕದ್ದು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿಕೊಂಡು ಜೀವನ ಸಾಗಿಸುತ್ತಿದ್ದ.
 

Share this Video
  • FB
  • Linkdin
  • Whatsapp

ಸ್ಯಾಂಟ್ರೋ ರವಿ ಹೈ ಪ್ರೊಫೈಲ್ ಪಿಂಪ್ ಆಗಿ ಬೆಳದು ಬಿಟ್ಟ. ಅದೆಷ್ಟರ ಮಟ್ಟಿಗೆ ಈತ ಬೆಳೆದುಬಿಟ್ಟ ಅಂದ್ರೆ ಪೊಲೀಸ್, ಆಧಿಕಾರಿಗಳೂ ಇವನನ್ನ ಸರ್ ಅನ್ನೋ ಮಟ್ಟಿಗೆ. ಆದ್ರೆ ಇವತ್ತು ರಾಜಕೀಯದಲ್ಲೂ ಹಾಟ್ ಕೇಕ್ ತರ ಇವನ ಹೆಸರು ಸೇಲಾಗ್ತಿದೆ. ಸ್ಯಾಂಟ್ರೋ ರವಿಯ ಮೈಲೇಜ್, ಕೇವಲ ರಾಜಕೀಯದಲ್ಲಷ್ಟೇ ಅಲ್ಲ ಪೊಲೀಸ್ ಡಿಪಾರ್ಟ್ಮೆಂಟ್'ನಿಂದಲೂ ಈತ ಮಾಡಿದ ಒಂದೊಂದು ಕರ್ಮಾಕಾಂಡಗಳು ಬಯಲಾಗ್ತಿವೆ. ಆದ್ರೆ ಕರ್ನಾಟಕದಲ್ಲಿ ಇವನ ವಿಷಯವಾಗಿ ಇಷ್ಟೆಲ್ಲಾ ಹೈಡ್ರಾಮಗಳು ನಡೆಯುತ್ತಿದ್ರೂ ಈ ಸ್ಯಾಂಟ್ರೋ ರವಿ ಮಾತ್ರ ಎಸ್ಕೇಪ್. ಅಷ್ಟಕ್ಕೂ ಈ ಸ್ಯಾಂಟ್ರೋ ರವಿಯ ಲೇಟಸ್ಟ್ ಅಪ್ಡೇಟ್ ಏನು..? ಈ ಕ್ರಿಮಿ ಎಲ್ಲಿ ಅಡಗಿ ಕುಳಿತಿದೆ. ಮಾಜಿ ಮುಖ್ಯಮಂತ್ರಿಗಳ ಹೊಸ ಬಾಂಬ್ ಯಾವುದು ಎಂಬುದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Related Video