ಕಪ್ಪುಬಾವುಟ ಹಿಡಿದು ಕೇಂದ್ರ ಗೃಹ ಸಚಿವರ ಕಾರು ತಡೆದಿದ್ದೆ: ವಾಟಾಳ್ ನಾಗರಾಜ್ 'ಚಳವಳಿ' ನೆನಪು

ಅಂದಿನ ಕೇಂದ್ರದ ಗೃಹ ಮಂತ್ರಿ ವೈ.ಬಿ ಚವ್ಹಾಣ ಬೆಂಗಳೂರಿಗೆ ಬರುವಾಗ ಅವರಿಗೆ ಕಪ್ಪು ಬಾವುಟ ಹಿಡಿದು ಅವರ ಕಾರು ತಡೆದಿದ್ದೆ ಎಂದು ವಾಟಾಳ್ ನಾಗರಾಜ್ ಹೇಳಿದರು.

First Published Jan 10, 2023, 5:16 PM IST | Last Updated Jan 10, 2023, 5:16 PM IST

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ತೀರ್ಮಾನವಾಗಿದೆ, ಹೀಗಾಗಿ ಆಯೋಗವನ್ನು ರಚನೆ ಮಾಡಬಾರದು ಎಂದು ಅಂದಿನ ಕೇಂದ್ರ ಗೃಹ ಮಂತ್ರಿ ಬೆಂಗಳೂರಿಗೆ ಬರುವಾಗ ಅವರಿಗೆ ಕಪ್ಪು ಬಾವುಟ ಹಿಡಿದು ಅವರ ಕಾರು ತಡೆಯುತ್ತೇನೆ. ಈ ಶಕ್ತಿ ಯಾರಿಗೆ ಇದೆ ಹೇಳಿ ಎಂದು ವಾಟಾಳ್ ನಾಗರಾಜ್ ಹಳೆ ನೆನಪು ಮೆಲುಕು ಹಾಕಿದರು. ಆ ಸಂದರ್ಭದಲ್ಲಿ ವಾಟಾಳ್‌ ನಾಗರಾಜ್‌'ರನ್ನು ಬಂಧನ ಮಾಡಲೇಬೇಕು ಎಂದು ಗರುಡಾಚಾರ್‌ ಆದೇಶ ಹೊರಡಿಸುತ್ತಾರೆ. ನಿಮ್ಮ ಹಣೆಯಲ್ಲಿ ಬರೆದಿಲ್ಲ ನನ್ನನ್ನು ಹಿಡಿಯುವುದು ಎಂದು ನಾನು ಆಗ ಹೇಳುತ್ತೇನೆ ಎಂದು ತಮ್ಮ ಹೋರಾಟ ಅನುಭವ ಹಂಚಿಕೊಂಡರು.