ರಾಜಕೀಯ ಆಟಕ್ಕೆ ಎರಡು ಜೀವಗಳು ಬಲಿ: ಕ್ರಿಕೆಟ್ ಆಡಲು ಹೋಗಿ ಹೆಣವಾಗಿ ಬಂದ ಯುವಕರು

ಅಲ್ಲಿ ಕೇವಲ ಕ್ರಿಕೆಟ್ ಮಾತ್ರ ಇರಲಿಲ್ಲ, ಜೊತೆಗೆ ರಾಜಕೀಯವೂ ಬೆರೆತುಹೋಗಿತ್ತು.‌ ದೊಡ್ಡವರ ರಾಜಕೀಯದ‌ ಆಟದಲ್ಲಿ ಎರಡು ಅಮಾಯಕ ಜೀವಗಳು ಬಲಿಯಾದವು...

Share this Video
  • FB
  • Linkdin
  • Whatsapp

ಅದು ಶಿವರಾತ್ರಿಯ ದಿನ, ಅವತ್ತು ಇಡೀ ರಾಜ್ಯವೇ ಶಿವರಾತ್ರಿ ಆಚರಣೆಯಲ್ಲಿ ಮುಳುಗಿತ್ತು. ಆದರೆ ಆ ಊರಿನ ಜನ ಮಾತ್ರ ತಮ್ಮದೇ ಊರಿನ ಇಬ್ಬರು ಯುವಕರ ಶವಯಾತ್ರೆಗೆ ಅಣಿಯಾಗಿದ್ದರು. ಕ್ರಿಕೆಟ್ ಮ್ಯಾಚ್ ಇದೆ ಆಡಿಕೊಂಡು ಬರ್ತೀನಿ ಅಂತ ಹೊರ ಹೋದ ಆ ಇಬ್ಬರು ಯುವಕರು ಹೆಣವಾಗಿ ಮನೆ ಸೇರಿದ್ರು. ಯಾರೋ ಮಾಡಿದ ಸಣ್ಣ ಗಲಾಟೆಗೆ ಬದುಕಿ ಬಾಳಬೇಕಿದ್ದ ಯುವಕರು ನಡು ರಸ್ತೆಯಲ್ಲಿ ಪ್ರಾಣ ಬಿಟ್ಟಿದ್ರು. ರಾಜಕೀಯ ವೈಷ್ಯಮ್ಯಕ್ಕೋ, ಸಾರಾಯಿ ನಶೆಯ ಅಮಲಿಗೋ, ಅಥವಾ ದುರಹಂಕಾರದ ಪರಮಾವಧಿಗೋ ಅಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿತ್ತು. ಕ್ರಿಕೆಟ್ ಆಡಲು ಹೋದ ಆ ಇಬ್ಬರು ಅಮಾಯಕ ಹುಡುಗರು, ತಮ್ಮದಲ್ಲದ ತಪ್ಪಿಗೆ ಸಾವನ್ನ ಕಂಡಿದ್ದರು. ಏನಿದು ಸ್ಟೋರಿ? ಇಲ್ಲಿದೆ ಸಂಪೂರ್ಣ ಡಿಟೇಲ್ಸ್.

Related Video