Cover Story: ಮೊಬೈಲ್‌ ಆ್ಯಪ್‌ನಲ್ಲಿ ಸಾಲ ಮಾಡ್ತೀರಾ.? ಹಾಗಾದ್ರೆ ಈ ಸುದ್ದಿ ನೋಡಿ

 ಇದು ದೇಶದ ಭದ್ರತೆಗೆ ಸಂಬಂಧಿಸಿದ ಸುದ್ದಿ. ಮೊಬೈಲ್‌ ಆ್ಯಪ್‌ (Mobile App) ಒಂದರಲ್ಲಿ ಮಾಡಿಕೊಂಡ ಸಾಲ(Loan) ಮರು ಪಾವತಿಸಲಾಗದೆ ಎಂಎನ್‌ಸಿ ಉದ್ಯೋಗಿಯೊಬ್ಬರು ಡೆತ್‌ ನೋಟ್‌ ಬರೆದು ಆತ್ಮಹತ್ಯೆ(Suicide) ಮಾಡಿಕೊಂಡ ಘಟನೆ ಉಡುಪಿ(Udupi) ಜಿಲ್ಲೆ ಹೆಮ್ಮಾಡಿಯ ಹರೆಗೋಡುವಿನಲ್ಲಿ ನಡೆದಿದೆ. 

First Published Feb 5, 2022, 5:45 PM IST | Last Updated Feb 5, 2022, 6:09 PM IST

ಬೆಂಗಳೂರು (ಫೆ. 05): ಇದು ದೇಶದ ಭದ್ರತೆಗೆ ಸಂಬಂಧಿಸಿದ ಸುದ್ದಿ. ಮೊಬೈಲ್‌ ಆ್ಯಪ್‌ (Mobile App) ಒಂದರಲ್ಲಿ ಮಾಡಿಕೊಂಡ ಸಾಲ(Loan) ಮರು ಪಾವತಿಸಲಾಗದೆ ಎಂಎನ್‌ಸಿ ಉದ್ಯೋಗಿಯೊಬ್ಬರು ಡೆತ್‌ ನೋಟ್‌ ಬರೆದು ಆತ್ಮಹತ್ಯೆ(Suicide) ಮಾಡಿಕೊಂಡ ಘಟನೆ ಉಡುಪಿ(Udupi) ಜಿಲ್ಲೆ ಹೆಮ್ಮಾಡಿಯ ಹರೆಗೋಡುವಿನಲ್ಲಿ ನಡೆದಿದೆ.

Bengaluru: ಕೆಮಿಕಲ್ ಪೌಡರ್ ಮಿಕ್ಸ್ ಮಾಡ್ತಾರೆ, ಕಲಬೆರಕೆ ಚಿನ್ನ ರೆಡಿ ಮಾಡ್ತಾರೆ, ಎಚ್ಚರ..! 

ಹೆಮ್ಮಾಡಿಯ ಹರೆಗೋಡು ಕೊಳಹಿತ್ಲು ನಿವಾಸಿ ವಿಘ್ನೇಶ್‌(25) ಮೃತರು. ಲಾಕ್‌ಡೌನ್‌(Lockdown) ಬಳಿಕ ವರ್ಕ್ ಫ್ರಂ ಹೋಂ ಮಾಡುತ್ತಿದ್ದ ವಿಘ್ನೇಶ್‌, ಸ್ನೇಹಿತರ ಜತೆಗೂಡಿ ಬ್ರಹ್ಮಾವರ ಸಮೀಪ ಚಪ್ಪಲಿ ಅಂಗಡಿ ತೆರೆದಿದ್ದರು. ಇದಕ್ಕೆ ಆ್ಯಪ್‌ ಮೂಲಕ ಸಾಲ ಮಾಡಿದ್ದರು. ವ್ಯವಹಾರ ಕೈಹಿಡಿಯದ ಹಿನ್ನೆಲೆಯಲ್ಲಿ ಸಾಲ ತೀರಿಸಲು ಆಗಿರಲಿಲ್ಲ. ಸಾಲ ಕೊಟ್ಟವರು ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದು ಬರೀ ವಿಘ್ನೇಶ್ ಕಥೆಯಲ್ಲ, ಸಾಕಷ್ಟು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಕೆಲವು ಮಂದಿ ಸಾಲ ತೀರಿಸಲಾಗದೇ ಒದ್ದಾಡುತ್ತಿದ್ದಾರೆ. ಈ ಬಗ್ಗೆ ಕವರ್ ಸ್ಟೋರಿ ಕಾರ್ಯಾಚರಣೆ ನಡೆಸಿದೆ. 

Video Top Stories