ತುಂಗಾಭದ್ರ ನದಿಯ ಒಡಲು ಬರಿದು ಮಾಡುವ ಮಾಫಿಯಾ: ಅಕ್ರಮ ಮರಳು ಗಣಿಗಾರಿಕೆ ದಂಧೆ
ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿರುವ ಮಾಫಿಯಾ ಬಗ್ಗೆ ಕವರ್ ಸ್ಟೋರಿ ತಂಡ ಕಾರ್ಯಾಚರಣೆ ಮಾಡಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ನಿಟುಹಳ್ಳಿ ಹಾಗೂ ಕೋಟೆಹಾಳ ಗ್ರಾಮಗಳ ಮಧ್ಯ ಭಾಗದಲ್ಲಿ ತುಂಗಾ ಭದ್ರ ನದಿಯ ದಡದಲ್ಲಿ ಅತಿ ದೊಡ್ಡ ಮರಳು ಮಾಫಿಯಾ ನಡೆಯುತ್ತಿದೆ. ಆ ಕೋಟೆಯೊಳಗೆ ಕವರ್ ಸ್ಟೋರಿ ತಂಡ ಹೋದಾಗ ಬೆಚ್ಚಿ ಬೀಳುವು ದೃಶ್ಯ ಕಣ್ಣಿಗೆ ಬಿದ್ದಿತ್ತು. ಈ ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಸಾಕಷ್ಟು ಸಾಕ್ಷಿ ಸಿಕ್ಕಿದ್ದು, ಶೇಖರಣೆ ಮಾಡಿದಂತ ಮರಳನ್ನು ಒಂದು ಕಡೆ ಇಂದ ಮತ್ತೊಂದು ಕಡೆ ಸಾಗಾಣಿಕೆ ಮಾಡಲಾಗುತ್ತಿದೆ. ದಿನದ 24ಗಂಟೆ ಕಾಲವೂ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ತುಂಗಾಭದ್ರ ನದಿಗೆ ಸಾಕಷ್ಟು ಅಪಾಯ ಬಂದಿದೆ. ತುಂಗಾಭದ್ರ ನದಿಯ ಒಡಲನ್ನು ಬರಿದು ಮಾಡುತ್ತಿದ್ದಾರೆ.