ಆಸ್ತಿಯಲ್ಲಿ ಪಾಲು ಕೊಡದ ನಿವೃತ್ತ ಪಿಎಸ್‌ಐ: ತಂದೆಯನ್ನು ಕೊಲೆ ಮಾಡಿಸಿದ ಮಕ್ಕಳು

ಆಸ್ತಿಯಲ್ಲಿ ಪಾಲು ಕೊಡದ ಅಪ್ಪನ ಹತ್ಯೆಗೆ ಸುಪಾರಿ ಕೊಟ್ಟು ಮಕ್ಕಳೇ ಕೊಲೆ ಮಾಡಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ನಡೆದಿದೆ. 
 

Share this Video
  • FB
  • Linkdin
  • Whatsapp

ಆಸ್ತಿ ವಿಚಾರವಾಗಿ ನಿವೃತ್ತ ಪಿಎಸ್‌ಐ ನಾಗೇಂದ್ರಪ್ಪನನ್ನು ಆತನ ಮಕ್ಕಳು ಕೊಲೆ ಮಾಡಿಸಿದ್ದಾರೆ. ನವೆಂಬರ್ 29ರಂದು ನಾಗೇಂದ್ರಪ್ಪ ಶವ ಚರಂಡಿಯಲ್ಲಿ ಸಿಕ್ಕಿತ್ತು. ಮಕ್ಕಳಾದ ಮಂಜುನಾಥ್‌ ಹಾಗೂ ಉಮೇಶ್‌ರಿಂದ ಅಪ್ಪನ ಹತ್ಯೆಗೆ ಭೋವಿ ಗ್ರಾಮದ ರಿಜ್ವಾನ್‌ ಹಬೀಬುಲ್ಲಾ ಸುಹೇಲ್‌ಗೆ ಐದು ಲಕ್ಷಕ್ಕೆ ಸುಪಾರಿ ಕೊಡಲಾಗಿದೆ. ಎರಡು ವರ್ಷದ ಹಿಂದೆ ನಾಗೇಂದ್ರಪ್ಪ, ವಿಧವೆಯನ್ನು ಮದುವೆಯಾಗಿದ್ದನು. ಆಸ್ತಿ ಪಾಲು ಮಾಡುವಂತೆ ಮಕ್ಕಳು ದುಂಬಾಲು ಬಿದ್ದು, ಅಪ್ಪನ ವಿರುದ್ಧವೇ ಕೋರ್ಟ್‌ನಲ್ಲಿ ಕೇಸ್‌ ಹಾಕಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೆಹಲಿ ಏರ್‌ಪೋರ್ಟ್‌ನಲ್ಲಿ ಸಿಕ್ಕಾಪಟ್ಟೆ ಕ್ಯೂ: ದಿಢೀರ್‌ ಭೇಟಿ ಕೊಟ್ಟ ಕೆಂದ್ರ ಸಚಿವ..!

Related Video