Asianet Suvarna News Asianet Suvarna News

ಒಂದೇ ಟೈಮಲ್ಲಿ 12 ಯುವತಿಯರೊಂದಿಗೆ ಚಾಟಿಂಗ್: ಕೆಲಸ ಕೊಡಿಸೋ ನೆಪದಲ್ಲಿ ಕಾಮಕ್ರೀಡೆಗೆ ಬಳಕೆ

ಇನ್ಸ್ಟಾಗ್ರಾಂನಲ್ಲಿ ಚಾಟ್ ಮಾಡುವಾಗ ಹುಷಾರ್..!
ಹುಡುಗಿಯ ಪ್ರೊಫೈಲ್ನಲ್ಲಿ ಕಾಮುಕನ ಮೆಸೇಜ್..!
ಕೆಲಸದ ನೆಪದಲ್ಲಿ ಓಯೋ ರೂಮ್ಗೆ ಕರೀತಾನೆ..!
ಅವನಿಗೆ ಆಂಧ್ರ ಹುಡುಗಿಯರೇ ಟಾರ್ಗೆಟ್ ಆಗಿದ್ರು..!

ಬೆಂಗಳೂರು (ಫೆ.04): ಅವನೊಬ್ಬ ವಿದ್ಯಾವಂತ... ಬುದ್ಧಿವಂತ... ಹೇಳಿಕೊಳ್ಳೋಕೆ ಸಾಫ್ಟ್‌ವೇರ್‌ ಇಂಜನಿಯರ್.. 4 ವರ್ಷದ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದ. ಈತನಿಗೆ ಒಳ್ಳೆಯ ಕೆಲಸವೂ ಇದೆ...  ಆದರೆ ತನ್ನ ಬುದ್ಧಿವಂತಿಕೆಯನ್ನು ತನ್ನ ಕೆಲಸದಲ್ಲಿ ತೋರಿಸಿದ್ದರೆ ಇಷ್ಟೊತ್ತಿಗೆ ಏನೇನೋ ಆಗಿಬಿಡ್ತಿದ್ದ.. ಆದ್ರೆ ಈತ ತನ್ನ ಬುದ್ಧಿವಂತಿಕೆಯನ್ನ ತನ್ನ ಕಾಮದಾಹ ತೀರಿಸಿಕೊಳ್ಳೋದಕ್ಕೆ ಬಳಸಿಬಿಟ್ಟಿದ್ದಾನೆ.

ಈತ ಅದೆಂತಹ ಖತರ್ನಾಕ್ ಕಾಮುಕ ಎಂದರೆ ಈತನಿಗೆ ಟೀನೇಜಿನ ಹುಡುಗಿಯರೇ ಟಾರ್ಗೆಟ್. ಅದರಲ್ಲೂ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಅಮಾಯಕ ಹೆಣ್ಣು ಮಕ್ಕಳನ್ನೇ ಈತ ನೋಡಿ ನೋಡಿ ಹಾರಿಸಿಕೊಳ್ತಿದ್ದನು. ಕಳೆದ ಮೂರು ವರ್ಷದಲ್ಲಿ ಆತ ಅದೆಷ್ಟು ಹೆಣ್ಣು ಮಕ್ಕಳ ಜೀವನವನ್ನ ಹಾಳು ಮಾಡಿದ್ದಾನೋ ಅವನಿಗೇ ಲೆಕ್ಕ ಇಲ್ಲ.. ಆದರೆ ಇವತ್ತು ಅವನ ಆಟಕ್ಕೆ ಫುಲ್ ಸ್ಟಾಪ್ ಬಿದ್ದಿದೆ. ಪೊಲೀಸರು ಕೊನೆಗೂ ಇವನ ಹೆಡೆಮುರಿ ಕಟ್ಟಿದ್ದಾರೆ. ಹೀಗೆ ತನ್ನ ಕಾಮ ದಾಹಕ್ಕೆ ಅಮಾಯಕ ಯುವತಿಯರ ಜೀವನ ಹಾಳು ಮಾಡಿದ ಕಾಮ ಪಿಶಾಚಿಯ ಕಥೆಯೇ ಇವತ್ತಿನ ನಮ್ಮ ಎಫ್.ಐ.ಆರ್.

POCSO: ಸರ್ಕಾರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಶಿಕ್ಷಕ- ಶಿಕ್ಷಕಿಯ ಮೇಲೆ ಪೋಕ್ಸೋ ಕೇಸ್‌

ರೀಲ್ಸ್‌, ಡ್ಯಾನ್ಸ್‌ ಮಾಡುವವರಿಂದ ಹುಚ್ಚು: ಇಂತಹ ಕಾಮ ಪಿಶಾಚಿಗೆ ಒಳ್ಳೆ ಕೆಲಸ.. ಕೈತುಂಬ ಸಂಬಳ.. ಹೇಳಿಕೊಳ್ಳೊಕೆ ಯಾವುದೂ ಸಮಸ್ಯೆ ಇಲ್ಲದ ವ್ಯಕ್ತಿಯಾಗಿದ್ದಾನೆ. ಆದರೆ, ಈತನ ಮೈಗಂಟಿದ ಕಾಮದ ಹುಚ್ಚು ಅಮಾಯಕ ಹೆಣ್ಣು ಮಕ್ಕಳ ಕಡೆ ತಿರುಗಿತ್ತು. ಜಾಗತೀಕರಣಗೊಂಡ ಸೋ ಕಾಲ್ಡ್ ಜಮಾನದಲ್ಲಿ ಹೆಣ್ಣು ಮಕ್ಕಳು ಮಾಡೊ ರೀಲ್ಸ್, ಡ್ಯಾನ್ಸ್‌ಗಳು ಆತನ ಹುಚ್ಚಿಡಿಸಿದ್ದವು. ಹಾಗಂತೆ ಈತ ಅವರಿಗೆ ಬಲೆ ಹಾಕುತ್ತಿರಲಿಲ್ಲ. ಅಮಾಯಕ ಹಾಗೂ ಕೆಲಸ ಹುಡುಕುವ ಹೆಣ್ಣು ಮಕ್ಕಳನ್ನು ಬಲೆಗೆ ಬೀಳಿಸಿಕೊಳ್ಳುತಿದ್ದನು.

ಒಟ್ಟೊಟ್ಟಿಗೆ 12 ಯುವತಿಯರೊಂದಿಗೆ ಚಾಟಿಂಗ್: ಇನ್ನು ಈತನ ಮೆಸೆಜ್ ಗಳನ್ನು ನಂಬುತಿದ್ದ ಅಕೆ ಎಲ್ಲೋ ಒಂದು ಕಡೆ ತನಗೂ ಕೆಲಸ ಸಿಗಬಹುದೆಂಬ ನಂಬಿಕೆಯಲ್ಲಿದ್ದಳು. ಇದಕ್ಕಾಗಿ ಆಕೆ ಸಹ ತಾನು ಏನು ಮಾಡಬೇಕು ಅಂತ ಆತನಿಗೆ ಕೇಳಿ ಬಿಟ್ಟಿದ್ದಳು. ಅಲ್ಲಿಗೆ ಪ್ರಸಾದನ ಹೊಸ ಗೇಮ್ ಶುರುವಾಗಿತ್ತು. ಅಲ್ಲಿಗೆ ಆತನ ಅಸಲೀ ಮುಖವಾಡ ಕಳಚುತ್ತಾ ಬಂದಿದೆ. ಇದನ್ನು ಸೂಕ್ಷ್ಮವಾಗಿಯೇ ಅರಿತ ಯುವತಿಯೂ ಚಾಣಾಕ್ಷ ಹೆಜ್ಜೆಯನ್ನಿಟ್ಟಿದ್ದಾಳೆ. 

ಫೇಕ್‌ ಅಕೌಂಟ್‌ನಿಂದ ಚಾಟಿಂಗ್:  ಕೆಲಸ ಕೊಡಿಸೋ ನೆಪದಲ್ಲಿ ಫೇಕ್ ಅಕೌಂಟ್‌ನಿಂದ ಚಾಟ್ ಮಾಡೋ ಈ ಕಾಮುಕ ನಂತರ ನಿಧಾನವಾಗಿ ಆಕೆಯನ್ನ ತನ್ನ ಬುಟ್ಟಿಗೆ ಬೀಳಿಸಿಕೊಳ್ತಾನೆ. ಆಕೆಯನ್ನ ಪುಸಲಾಯಿಸಿ ಆಕೆಯ ಅರೆಬೆತ್ತಲೆ ಫೋಟೋಗಳನ್ನ ಕಳಿಸು ಅಂತ ಕೇಳ್ತಾನೆ.. ಆಕೆ ಕೂಡ ಹುಡುಗಿ ತಾನೇ ಕೇಳ್ತಿರೋದು ಅಂತ ಅಂದುಕೊಂಡು ಈತನಿಗೆ ಆಕೆಯ ನಗ್ನ ಫೋಟೋಗಳನ್ನ ಕಳಿಸಿಬಿಡ್ತಾಳೆ.. ಅಷ್ಟೇ.. ಅಲ್ಲಿಗೆ ಅವಳು ಟ್ರಾಪ್ ಆದಳು ಅಂತಲೇ ಅರ್ಥ.. ಇಂಟರ್ವ್ಯೂವ್ ಇದೆ ಬಾ ಅಂತ ಈತ ತನ್ನಲ್ಲಿಗೆ ಕರೆಸಿಕೊಳ್ತಿದ್ದನು... ಅದೂ ಎಲ್ಲಿಗೆ..? ಓಯೋ ರೂಮ್ಸ್ಗೆ.. ಹೀಗೆ ಈ ಪಾಪಿ ಅದೆಷ್ಟು ಹುಡುಗಿಯರ ಜೀವನದಲ್ಲಿ ಆಟವಾಡಿದ್ದಾನೆ ಗೊತ್ತಾ..? ಬರೊಬ್ಬರಿ 12 ಯುವತಿಯರನ್ನ ಕೆಡಿಸಿದ್ದಾನೆ.

Pocso case: 13 ವರ್ಷದ ಬಾಲೆ ಗರ್ಭಿಣಿ, ಸ್ವತಃ ತಂದೆಯಿಂದಲೇ ನಡೆದಿದೆ ಪಾಪ ಕೃತ್ಯ!

ಸೋಷಿಯಲ್‌ ಮೀಡಿಯಾದಲ್ಲಿ ಎಚ್ಚರ: ಸದ್ಯ ಈ ಕಾಮುಕನ ವಂಚನೆಯ ಜಾಲದ ವಿರುದ್ಧ ಬಂದ ಓರ್ವ ಮಹಿಳೆಯಿಂದ ಈತ ಆಟ ಬಯಲಾಗಿದೆ.. ರೈತನ‌ ಮಗನಾಗಿದ್ದ ಈತ ಕಾಮ ಪಿಶಾಚಿಯಾಗಿ ಅದೆಷ್ಟೊ ಮಹಿಳೆಯರಿಗೆ ಅತ್ಯಾಚಾರ ಮಾಡಿದ್ದಾನೆ.. ಸದ್ಯ ಪೊಲೀಸರು ಇನ್ನೂ ತನಿಖೆ ನಡೆಸುತಿದ್ದು, ಮತ್ತಷ್ಟು ವಂಚನೆ ಪ್ರಕರಣ ಬಯಲಾಗೊ ಸಾಧ್ಯತೆಗಳಿವೆ.. ಆದ್ರೆ ಈ ಸೋಷಿಯಲ್ ಮೀಡಿಯಾದಲ್ಲಿ 24 ಗಂಟೆ ತಲ್ಲೀನ ಅಗಿರುವ ನಮ್ಮ ಹೆಣ್ಣು ಮಕ್ಕಳೇ ಯಾವುದೇ ಮೆಸೆಜ್ ಅಥವಾ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡುವ ಮೊದಲು ಹುಷಾರ್ ಆಗಿರಿ.