Asianet Suvarna News Asianet Suvarna News

'ಸೋಪಿನ ನೊರೆಯೋ.. ಮೋಸದ ಸುಳಿಯೋ..' ಡ್ರಾಮಾ ಸೀನಿಯರ್ಸ್‌ಗೆ ಆಕ್ಷನ್‌ ಕಟ್‌ ಹೇಳಿದ್ರಾ ಚೈತ್ರಾ ಕುಂದಾಪುರ!

ವಂಚನೆ ಆರೋಪಿ ಚೈತ್ರಾಳ ಮತ್ತೊಂದು ಸಿನಿಮಾ ರಿಲೀಸ್‌ ಆಗಿದೆ.  ಅವಳ ಬಾಯಿಂದ ಬಂದಿದ್ದು ಸೋಪಿನ ನೊರೆಯೇ ಎನ್ನುವ ಅನುಮಾನದ ನಡುವೆ 2 ಹೊಸ ಆಡಿಯೋಗಳು ರಿಲೀಸ್‌ ಆಗಿವೆ. ಗೋವಿಂದ ಬಾಬು ಅವರ ಕಚೇರಿಯಲ್ಲಿ ಚೈತ್ರಾ ಬೃಹನ್ ನಾಟಕ ಆಡಿದ ವಿಚಾರ ಬಹಿರಂಗವಾಗಿದೆ.

ಬೆಂಗಳೂರು (ಸೆ.16): 5 ಕೋಟಿ ಪಂಗನಾಮ ಹಾಕಿದ್ದ ಚೈತ್ರಾ ಕುಂದಾಪುರ ಆ್ಯಂಡ್ ಗ್ಯಾಂಗ್ ಈಗ ಅಂದರ್ ಆಗಿದೆ. ಆದ್ರೆ ಒಬ್ಬರು ಮಾತ್ರ ಇನ್ನೂ ನಾಪತ್ತೆ. ಒಂದೂವರೆ ಕೋಟಿ ಪಡೆದವರು ಇನ್ನೂ ಪೊಲೀಸರಿಗೆ ದರ್ಶನ ಕೊಡಬೇಕಿದೆ.  ಉದ್ಯಮಿಯೊಬ್ಬರಿಗೆ ಸಿನಿಮಾ ತೋರಿಸಿ ಕೋಟಿ ಕೋಟಿ ನುಂಗಿದ್ದ ಚೈತ್ರಾ ಈಗ ಹೊಸ ಸಿನಿಮಾವನ್ನ ನಾಡಿನ ಜನತೆಗೆ ತೋರಿಸುತ್ತಿದ್ದಾರೆ. ಪೊಲೀಸರ ವಶದಲ್ಲಿದ್ದುಕೊಂಡೇ ಹೊಸ ಸ್ಕ್ರೀನ್ ಪ್ಲೇ ಬರೆಯುತ್ತಿದ್ದಾಳೆ. ಅಷ್ಟಕ್ಕೂ ಚೈತ್ರಾ ಕುಂದಾಪುರ ಮಾಡ್ತಿರೋ ಹೊಸ ಸಿನಿಮಾ ಯಾವುದು..? 5 ಕೋಟಿಯ ಡೀಲ್ ಕೇಸ್ ತನಿಖೆ ಎಲ್ಲಿವರೆಗೆ ಬಂದಿದೆ..? 

ಚೈತ್ರಾ ಆಸ್ಪತ್ರೆಗೆ ಸೇರಲು ಡ್ರಾಮ ಮಾಡಿದ್ಲಾ ಅನ್ನೋ ಅನುಮಾನ ಎಲ್ಲರಿಗೂ ಕಾಡುತ್ತಿರುವಾಗ್ಲೇ ಇತ್ತ ಇದೇ 5 ಕೋಟಿ ಡೀಲ್ ಸಂಬಂಧಿಸಿದ 2 ಆಡಿಯೋ ಕ್ಲಿಪ್ಗಳು ರಿಲೀಸ್ ಆಗಿದ್ದವು. ಅದರಲ್ಲೊಂದು ಬೆಂಗಳೂರಿನ ಕಬಾಬ್ ಮಾರುವವನಿಗೆ ಹೇರ್ ಕಟ್ ಮಾಡಿದನ್ನಲ್ಲ ಸಲೂನ್ ಓನರ್ ಆತನಿಗೆ ಇದೇ ಚೈತ್ರಾ ಕುಂದಾಪುರ ಗ್ಯಾಂಗ್‌ನ ಸದಸ್ಯನ್ನೊಬ್ಬನ ಸ್ನೇಹಿತ ಪ್ರಾಣಬೆದರಿಕೆ ಹಾಕಿರೋದು.

ಇಲ್ಲಿ ನಾಟಕ.. ಅಲ್ಲಿ ಧಮ್ಕಿ.. ಲೇಡಿ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಕಿಲಾಡಿ ಕಥೆ ಹೀಗಿದೆ..

ಈಕೆಯ ಒಂದೊಂದೇ ನಾಟಕಗಳು ಈಗ ಹೊರಬರುತ್ತಿದೆ. ಇದು ಜಸ್ಟ್ ಸ್ಯಾಂಪಲ್ ಅಷ್ಟೇ.. ಈಕೆ ಇನ್ನೂ ಎಲ್ಲೆಲ್ಲಿ ಯಾವ್ಯಾವ ರೀತಿ ಯಾರಿಗೆ  ಮೋಸ ಮಾಡಿದ್ದಾಳೆ ಅನ್ನೋದು ಪೊಲೀಸರ ತನಿಖೆಯ ವೇಳೆ ಬಯಲಿಗೆ ಬರಲಿದೆ.