ಹಗಲಲ್ಲಿ ಸ್ಕೆಚ್ ಹಾಕಿ ಮಧ್ಯರಾತ್ರಿ ಫೀಲ್ಡಿಗಿಳಿತಾರೆ ಕಳ್ಳರು..! ದಾರಿಹೋಕರಂತೆ ಓಡಾಡಿ ಟಾರ್ಗೆಟ್ ಫಿಕ್ಸ್ ಮಾಡೋ ಚಡ್ಡಿ ಗ್ಯಾಂಗ್‌

ಬೆಂಗಳೂರಿನಲ್ಲಿ ಸಕ್ರಿಯ ಆಯ್ತು ಚಡ್ಡಿ ಬನಿಯನ್ ಗ್ಯಾಂಗ್..!
ಥಗ್ಗರ ವಂಶದ ಹೊಸ ವರ್ಷನ್ ಈ ಚಡ್ಡಿ ಬನಿಯನ್‌ ಗ್ಯಾಂಗ್! 
ಭಿಕ್ಷುಕರ ಸೋಗಿನಲ್ಲಿ ಹಗಲಲ್ಲೇ ಸ್ಕೆಚ್ ಹಾಕ್ತಾರೆ ಖದೀಮರು..!

First Published Dec 25, 2023, 10:00 AM IST | Last Updated Dec 25, 2023, 10:01 AM IST

ಚಡ್ಡಿ ಬನಿಯನ್ ಹಾಕೊಂಡಿರೋರೆಲ್ಲಾ ಬಡವರಲ್ಲ. ರಾತ್ರಿ ಬಾಗಿಲು ತಟ್ಟ್ತಾರೆ. ಮಧ್ಯರಾತ್ರಿ 2 ರಿಂದ 4 ಗಂಟೆಗೆ ಬಾಗಿಲು ಬಡಿದ ಶಬ್ಧ ಕೇಳಿಸಿದ್ರೆ.. ಖೇಲ್ ಖತಂ.. ದುಕಾನ್ ಬಂದ್. ರಾತ್ರಿ ಆದ್ರೆ ಸಾಕು, ಬಟ್ಟೆ ಬಿಚ್ಚಿ ರೋಡ್‌ಗೆ ಇಳೀತಾರೆ. ಮನೆಯಲ್ಲಿ ಯಾರೇ ಇರಲಿ, ಎಷ್ಟೆ ಜನ ಇರಲಿ. ಬಾಗಿಲು ಬಡಿದೋ, ಇಲ್ಲಾ ಕಿಟಕಿ ಒಡೆದೋ. ಮನೆಗೆ ನುಗ್ಗಿ ಕ್ಷಣಾರ್ಧದಲ್ಲಿ ಗುಡುಸಿ ಗುಂಡಾಂತರ ಮಾಡ್ತಾರೆ. ಒಂದು ಸಣ್ಣ ಸುಳಿವು ಇಲ್ಲದೇ ದರೋಡೆ ಮಾಡ್ತಾರೆ. ಫಿಂಗರ್ ಪ್ರಿಂಟ್, ರಕ್ತದ ಕಲಿ.. ನೋ ವೇ.. ಚೂರೇ ಚೂರು ಸುಳಿವು ಸಿಗದಂತೆ ದೋಚಿ ಪರಾರಿಯಾಗ್ತಾರೆ. ಕಚ್ಚಾ ಬನಿಯನ್ ಗ್ಯಾಂಗ್. ಅರ್ಥಾತ್ ಚಡ್ಡಿ ಬನಿಯನ್ ಗ್ಯಾಂಗ್ (Chaddi Baniyan gang).. ವಿಕ್ಷಖರೇ.. ಚಡ್ಡಿ ಬನಿಯನ್  ಹಾಕಿಕೊಂಡು ರೋಡ್ ಮೇಲೆ ಹೋಗೊ ಎಲ್ಲಾರೂ ಬಡವರಲ್ಲ.. ಪಂಚೆ ಸುತ್ತಿಕೊಂಡು ಮನೆ ಹತ್ರ ಓಡಾಡುತ್ತಿದ್ದರೆ, ಅವರೆಲ್ಲಾ ಅಮಾಯಕರಲ್ಲಾ.. ಬದಲಾಗಿ ಅವರು ನರರೂಪಿ ರಾಕ್ಷಸರು. ಈ ತಲೆ ಒಡೆದು ಜೀವನ ಮಾಡೋರು ಅಂತಾರಲ್ಲಾ ಅವರೇ ಈ ಚಡ್ಡಿ ಬನಿಯನ್ ಗ್ಯಾಂಗ್‌ನವರು. ಕರ್ನಾಟಕದಲ್ಲಿ(Karnataka) ಕಳ್ಳರ ಗ್ಯಾಂಗ್‌ವೊಂದು ಬೀಡು ಬಿಟ್ಟಿದೆ. ಯಾವಾಗ ಹೇಗೆ ಬಂದು ಅಟ್ಯಾಕ್ ಮಾಡುತ್ತೋ ಅನ್ನೋ ಭಯ ಕಾಡ್ತಿದೆ. ಕಳ್ಳರು ಅಂದ್ರೆ ಬೀದಿಲಿ ಹೋಗೋವಾಗೋ, ಕಣ್ಣು ತಪ್ಪಿಸಿಯೋ.. ಇಲ್ಲಾ ಕಿತ್ತುಕೊಂಡೋ ಹೋಗೊ ದೃಶ್ಯಗಳನ್ನ ನೋಡಿದ್ವಿ. ಆದ್ರೆ ಅದೆಲ್ಲೋ ಉತ್ತರ ಭಾರತದಲ್ಲಿ ನಡೀತಿದ್ದ ಕಳ್ಳತನ, ದರೋಡೆ ಈಗ ನಮ್ಮ ಕರ್ನಾಟಕಕ್ಕೂ ಎಂಟ್ರಿ ಕೊಟ್ಟಿದೆ. ಅದುವೇ ಚಡ್ಡಿ ಬನಿಯನ್ ಗ್ಯಾಂಗ್.

ಇದನ್ನೂ ವೀಕ್ಷಿಸಿ:  ಈತ ಆಳೆತ್ತರದ ಪರ್ವತ ಹತ್ತೋದ್ರಲ್ಲೇ ನಿಸ್ಸೀಮ..! ಗೋರಿಲ್ಲಾ.. ವಾನರರಂತೆ ಇರೋದ್ರಲ್ಲೇ ಖುಷಿ ಪಡೋ ಲಿಯೋ..!

Video Top Stories