Asianet Suvarna News Asianet Suvarna News

ಡ್ರಗ್‌ ಕೇಸ್‌ನಲ್ಲಿ ತಲೆಮರೆಸಿಕೊಂಡಿರುವ ಆದಿತ್ಯ ಆಳ್ವಾ ಪತ್ತೆಗೆ ಲುಕೌಟ್ ನೋಟಿಸ್ ಜಾರಿ

ಡ್ರಗ್‌ ಕೇಸ್‌ನಲ್ಲಿ ತಲೆಮರೆಸಿಕೊಂಡಿರುವ ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ ಆದಿತ್ಯ ಆಳ್ವ ಪತ್ತೆಗೆ ಲುಕ್‌ಔಟ್ ನೋಟಿಸ್ ಜಾರಿಯಾಗಿದೆ.  ಆದಿತ್ಯ ವಿದೇಶಕ್ಕೆ ಪರಾರಿಯಾಗಿರುವ ಅನುಮಾನ ವ್ಯಕ್ತವಾಗಿದೆ. 

ಬೆಂಗಳೂರು (ಸೆ. 22): ಡ್ರಗ್‌ ಕೇಸ್‌ನಲ್ಲಿ ತಲೆಮರೆಸಿಕೊಂಡಿರುವ ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ ಆದಿತ್ಯ ಆಳ್ವ ಪತ್ತೆಗೆ ಲುಕ್‌ಔಟ್ ನೋಟಿಸ್ ಜಾರಿಯಾಗಿದೆ.  ಆದಿತ್ಯ ವಿದೇಶಕ್ಕೆ ಪರಾರಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಇವರ ಜೊತೆ ಜೆಡಿಎಸ್ ಮಾಜಿ ಸಂಸದನ ಪುತ್ರನಿಗೂ ನೊಟೀಸ್ ಜಾರಿಯಾಗಿದೆ. ಕೂಡಲೇ ವಿಚಾರಣೆಗೆ ಹಾಜರಾಗಬೇಕೆಂದು ತಿಳಿಸಲಾಗಿದೆ. 

ಹೊರಬಿತ್ತು ಸಂಜನಾ ಕುರಿತ ಮತ್ತೊಂದು ಶಾಕಿಂಗ್ ವಿಷಯ

ಇವರ ಜೊತೆಗೆ ನಟ ಯೋಗಿ, ಕ್ರಿಕೆಟಿಗ ಅಯ್ಯಪ್ಪ, ನಟಿ ರಶ್ಮಿಕಾ ಚೆಂಗಪ್ಪ, ಬ್ರಹ್ಮಗಂಟು ಸೀರಿಯಲ್‌ನ ಗೀತಾ ಭಟ್, ಗಟ್ಟಿಮೇಳದ ಅಭಿಷೇಕ್‌ಗೆ ಸಮನ್ಸ್ ನೀಡಲಾಗಿದೆ. 12 ಕ್ಕೂ ಹೆಚ್ಚು ವಿಐಪಿ ಕುಳಗಳಿಗೆ ಆಂತರಿಕ ಭದ್ರತಾ ವಿಭಾಗದ ತನಿಖೆ ಭೀತಿ ಎದುರಾಗಿದೆ. 

Video Top Stories