ವೀಕೆಂಡ್ ನೈಟ್ ಪಾರ್ಟಿಯಲ್ಲಿ ಪೆಡ್ಲರ್ ಜೊತೆ 'ಗೀತಾ'; ಇವರೂ ತಗೋತಿದ್ರಾ ಡ್ರಗ್ಸ್?
ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ನಟಿ ಗೀತಾ ಭಟ್‌ಗೆ ISD ನೊಟೀಸ್ ನೀಡಿದೆ. ಇಂದು ಗೀತಾ ಭಟ್ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆ ವೇಳೆ ಗೀತಾ ಲೈಫ್‌ಸ್ಟೈಲ್ ಬಗ್ಗೆ ಒಂದಷ್ಟು ಮಾಹಿತಿ ಸಿಕ್ಕಿದೆ.
ಬೆಂಗಳೂರು (ಸೆ. 22): 'ಬ್ರಹ್ಮಗಂಟು' ಧಾರಾವಾಹಿ ಖ್ಯಾತಿಯ ನಟಿ ಗೀತಾ ಭಟ್‌ಗೆ ISD ನೊಟೀಸ್ ನೀಡಿದೆ. ಇಂದು ಗೀತಾ ಭಟ್ ವಿಚಾರಣೆಗೆ ಹಾಜರಾಗಿದ್ದಾರೆ.
'ನಮ್ಮನ್ನು ವಿಚಾರಣೆಗೆ ಕರೆದಿದ್ದಷ್ಟೇ, ಆರೋಪಿಗಳು ಎಂದು ಹೇಳಿಲ್ಲ, ಹಾಗೆ ತೋರಿಸಬೇಡಿ'
ವಿಚಾರಣೆ ವೇಳೆ ಗೀತಾ ಲೈಫ್‌ಸ್ಟೈಲ್ ಬಗ್ಗೆ ಒಂದಷ್ಟು ಮಾಹಿತಿ ಸಿಕ್ಕಿದೆ. ಪ್ರತಿ ವೀಕೆಂಡ್ ಪಾರ್ಟಿಗಳಲ್ಲಿ ನಟಿ ಗೀತಾ ಹಾಜರಾಗುತ್ತಿದ್ದರು. ಪೆಡ್ಲರ್ ನವನೀತ್ ಎಂಬುವವನ ಜೊತೆ ನೈಟ್ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈ ನವನೀತ್ ಯಾರು ಎಂದು ನೋಡುವುದಾದರೆ ಈತ ಪಾರ್ಟಿಗಳಿಗೆ ಕೊಕೇನ್ ಸಪ್ಲೈ ಮಾಡುತ್ತಿದ್ದ. ಈತನ ಜೊತೆ ಗೀತಾ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಡ್ರಗ್ ಡೀಲ್ ಬಗ್ಗೆ ಇವರಿಗೂ ಮಾಹಿತಿ ಇದೆಯಾ? ಗೀತಾ ಕೂಡಾ ಡ್ರಗ್ ತೆಗೆದುಕೊಳ್ಳುತ್ತಿದ್ದಾರಾ? ಈ ಬಗ್ಗೆ ISD ವಿಚಾರಣೆ ನಡೆಸುತ್ತಿದೆ. ವಿಚಾರಣೆ ಬಳಿಕ ಮಾಹಿತಿ ಹೊರ ಬರಬೇಕಷ್ಟೇ.