Bitcoin scam; ಖರ್ಗೆ ಪಂಚ ಪ್ರಶ್ನೆಗೆ ಉತ್ತರ... ಶ್ರೀಕಿ FSL ವರದಿಯಲ್ಲಿ ಎಲ್ಲವೂ ಬಹಿರಂಗ!
* ರಾಜಕೀಯದಲ್ಲಿ ಸಂಚಲನ ಮೂಡಿಸಿದ ಬಿಟ್ ಕಾಯಿನ್ ಹಗರಣ
* ಪೊಲೀಸರೇ ಶ್ರೀಕಿಗೆ ಡ್ರಗ್ಸ್ ಮಾತ್ರೆ ನೀಡಿದ್ದರು ಎಂದು ಆರೋಪಿಸಿದ್ದ ಖರ್ಗೆ
* ಖರ್ಗೆ ಆರೋಪಕ್ಕೆ ಉತ್ತರ ಸಿಕ್ಕಿದ್ದು ಶ್ರೀಕಿಗೆ ಪೊಲೀಸರು ಮಾತ್ರೆ ಕೊಟ್ಟಿರಲಿಲ್ಲ
* FSL ವರದಿಯಲ್ಲಿ ಎಲ್ಲವೂ ಬಹಿರಂಗ
ಬೆಂಗಳೂರು(ನ. 12) ಬಿಟ್ ಕಾಯಿನ್ (Karnataka Bitcoin Scam) ಪ್ರಕರಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದಿದ್ದ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಪಂಚ ಪ್ರಶ್ನೆಯನ್ನು ಮುಂದೆ ಇಟ್ಟಿದ್ದಾರೆ. ಮಹಜರ್ ಗೆ ಲೈನ್ ಮೆನ್ ಅವರನ್ನು ಯಾಕೆ ಬಳಕೆ ಮಾಡಿಕೊಳ್ಳಲಾಯಿತು ಎಂದು ಕೇಳಿದ್ದಾರೆ.
ಹ್ಯಾಕರ್ ಶ್ರೀಕಿಯ ರಣ ರೋಚಕ ಇತಿಹಾಸ
ಹ್ಯಾಕರ್ ಶ್ರೀಕಿಗೆ ಪೊಲೀಸರೆ alprazolam ಮಾತ್ರೆ ನೀಡಿದ್ದರು ಎಂದು ಖರ್ಗೆ ಆರೋಪಿಸಿದ್ದರು. ಮೊದಲನೆ ಸಾರಿ ಇಲ್ಲ ಎಂದು ಶ್ರೀಕಿ ಹೇಳಿದ್ದ. ಇದಾದ ಮೇಲೆ ಬೌರಿಂಗ್ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಪೊಲೀಸ್ ಕಸ್ಟಡಿಯಲ್ಲಿ ಇದ್ದ ವೇಳೆ ಶ್ರೀಕಿ ಇಂಥ ಯಾವುದೇ ಮಾತ್ರೆ ತೆಗೆದುಕೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.