ಬೆಂಗಳೂರಿನಲ್ಲಿ ಮಿತಿ ಮೀರುತ್ತಿದೆ ಪುಂಡರ ವ್ಹೀಲಿಂಗ್ ಹಾವಳಿ: ಕಡಿವಾಣಕ್ಕೆ ಟಾಸ್ಕ್‌ಫೋರ್ಸ್ ಟೀಂ ರಚನೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಂಡರ ವ್ಹೀಲಿಂಗ್ ಹಾವಳಿ ಮಿತಿ ಮೀರುತ್ತಿದ್ದು, ಟ್ರಾಫಿಕ್ ಪೊಲೀಸರ ಕಣ್ತಪ್ಪಿಸಿ ಸಿಕ್ಕ ರೋಡ್‌ಗಳಲ್ಲಿ ಡೇಂಜರಸ್ ವ್ಹೀಲಿಂಗ್ ಮಾಡುತ್ತಿದ್ದಾರೆ. ರಿಂಗ್ ರೋಡ್, ಹೈವೇ, ಸಿಟಿ ಸೆಂಟರ್ ರೋಡ್‌ಗಳಲ್ಲಿ ಡ್ರಾಗ್ ರೇಸ್, ವ್ಹೀಲಿಂಗ್ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸೋ ಪೊಲೀಸರಿಗೆ ಇದು ಕಾಣ್ತಿಲ್ವ?
ಬೆಂಗಳೂರು (ಜ.05): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಂಡರ ವ್ಹೀಲಿಂಗ್ ಹಾವಳಿ ಮಿತಿ ಮೀರುತ್ತಿದ್ದು, ಟ್ರಾಫಿಕ್ ಪೊಲೀಸರ ಕಣ್ತಪ್ಪಿಸಿ ಸಿಕ್ಕ ರೋಡ್‌ಗಳಲ್ಲಿ ಡೇಂಜರಸ್ ವ್ಹೀಲಿಂಗ್ ಮಾಡುತ್ತಿದ್ದಾರೆ. ರಿಂಗ್ ರೋಡ್, ಹೈವೇ, ಸಿಟಿ ಸೆಂಟರ್ ರೋಡ್‌ಗಳಲ್ಲಿ ಡ್ರಾಗ್ ರೇಸ್, ವ್ಹೀಲಿಂಗ್ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸೋ ಪೊಲೀಸರಿಗೆ ಇದು ಕಾಣ್ತಿಲ್ವ? ಪೊಲೀಸರು ಅದೇನ್ ಮಾಡಿಕೊಳ್ತಾರೋ ಮಾಡಿಕೊಳ್ಳಲಿ ಅಂತ ರೋಡ್ ರೋಡ್‌ಗಳಲ್ಲಿ ಬಿಂದಾಸ್ಸಾಗಿ ಪುಂಡರು ವ್ಹೀಲಿಂಗ್ ಮಾಡ್ತಿದ್ದಾರೆ. ಅಲ್ಲದೇ ನ್ಯೂ ಇಯರ್ ವೇಳೆಯೂ ಟ್ರಾಫಿಕ್ ಪೊಲೀಸ್ ಎಚ್ಚರಿಕೆ ನಡುವೆಯೂ ಪುಂಡರ ವ್ಹೀಲಿಂಗ್ ನಿಂತಿಲ್ಲ.
ಏರ್ಪೋರ್ಟ್ ರೋಡ್, ತುಮಕೂರ್ ರೋಡ್, ನಾಗವಾರ ರಿಂಗ್ ರೋಡ್ ಹಾಗೂ ಸಿಟಿ ಒಳಗಿನ ಕೆಲ ರೋಡ್‌ಗಳಲ್ಲಿ ಇವರ ವ್ಹೀಲಿಂಗ್ ಹಾವಳಿ ಹೆಚ್ಚಾಗಿದ್ದು, ಇತರೆ ವಾಹನ ಸವಾರರು ಭಯ ಬಿದ್ದು ಸೈಡಿಗೋಗ್ತಿದ್ದಾರೆ. ಇವರನ್ನ ಮಟ್ಟ ಹಾಕ್ದೇ ಇದ್ರೆ, ಹೋಗೋದು ಪಕ್ಕಾ ಅಮಾಯಕ ಜನರ ಪ್ರಾಣ, ಹಾಗೂ ತಾವು ಮಾಡೋ ವ್ಹೀಲಿಂಗ್ ದೃಶ್ಯಗಳನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ ಲೋಡ್ ಮಾಡುತ್ತಿದ್ದು, ಈ ವಿಡಿಯೋಗಳನ್ನ ನೋಡ್ತಿದ್ರೆ ಬೆಚ್ಚಿ ಬೇಳೋದಂತು ಗ್ಯಾರಂಟಿ. ಅಷ್ಟು ಭಯಾನಕವಾಗಿ ಪುಂಡರು ಬೈಕ್‌ಗಳಲ್ಲಿ ವ್ಹೀಲಿಂಗ್ ಮಾಡ್ತಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಟ್ರಾಫಿಕ್ ಡಿಸಿಪಿ ಅನುಚೇತ್ ಇಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.