ವರ್ತೂರು ಸಂತೋಷ್‌ ಬಂಧನದ ಹಿಂದೆ ಷಡ್ಯಂತ್ರ, ಒರಿಜಿನಲ್ ಅಲ್ಲ ಅಂತಾ ಡೌಟಿದೆ ಎಂದ ತಾಯಿ

ಹುಲಿ ಉಗುರು ಧರಿಸಿದ ಆರೋಪದಲ್ಲಿ ಬಿಗ್‌ ಬಾಸ್ ಮನೆಯಿಂದ ಬಂಧನವಾಗಿರುವ ವರ್ತೂರು ಸಂತೋಷ್ ಬಗ್ಗೆ ಅವರ ಬಗ್ಗೆ ತಾಯಿ ಮಂಜುಳಾ ಹೇಳಿಕೆ ನೀಡಿದ್ದಾರೆ. 10 ವರ್ಷದ ಹಿಂದೆ ತಕೊಂಡಿದ್ದ ಇದು ಅಸಲಿಯಾ ಎಂದು ತಿಳಿದಿಲ್ಲ ಎಂದಿದ್ದಾರೆ.

Share this Video
  • FB
  • Linkdin
  • Whatsapp

ಹುಲಿ ಉಗುರು ಧರಿಸಿದ ಆರೋಪದಲ್ಲಿ ಬಿಗ್‌ ಬಾಸ್ ಮನೆಯಿಂದ ಬಂಧನವಾಗಿರುವ ವರ್ತೂರು ಸಂತೋಷ್ ಬಗ್ಗೆ ಅವರ ಬಗ್ಗೆ ತಾಯಿ ಮಂಜುಳಾ ಹೇಳಿಕೆ ನೀಡಿದ್ದಾರೆ. ಹುಲಿ ಉಗುರೋ ಅಥವಾ ಒರಿಜಿನಲ್ ಉಗುರೋ ಅಂತಾ ನನಗೆ ಗೊತ್ತಿಲ್ಲ. ಅಮ್ಮ ಇದನ್ನ ಸಿಟಿಯಲ್ಲಿ ಮಾಡಿಸಿಕೊಂಡು ಬಂದೆ ಅಂತ ಹೇಳಿದ್ದ, ಇದಕ್ಕೆ ಚೈನ್ ಮಾಡಿಸು ಅಂದ ನಾನು ಮಾಡಿಸಿದೆ. ಅಷ್ಟೋಂದು ಡೀಪ್ ಆಗಿ ಹೋಗಲಿಲ್ಲ. 10 ವರ್ಷದ ಹಿಂದೆ ಇದನ್ನ ತೆಗೆದುಕೊಂಡಿದ್ದ. ನನಗೂ ಡೌಟ್ ಇದೆ ಅದು ಒರಿಜಿನಲ್ ಅಲ್ಲ ಅಂತಾ. 10 ವರ್ಷದಿಂದ ಯಾರು ಅದನ್ನ. ಗಮನಿಸಿರಲಿಲ್ಲ. ಈಗ ಅದನ್ನ ಗಮನಿಸಿ ಅರೆಸ್ಟ್ ಮಾಡಿಸಿದ್ದಾರೆ ಅಂದರೆ ಇದರ ಹಿಂದೆ ಷಡ್ಯಂತ್ರ ಇದೆ. ನಾವು ಕಾನೂನು ಹೋರಾಟಕ್ಕೆ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದೇವೆ. ಅವನ ಹತ್ತಿರ ಇದೊಂದೇ ಡಾಲರ್ ಇರೋದು. ನನಗೆ ಗೊತ್ತಿದ್ರೆ ಅದನ್ನ ಹಾಕಿಕೊಳ್ಳುತ್ತಾ ಇರಲಿಲ್ಲ. ಯಾರೋ ಏನೋ ಬೇಕಂತಾನೇ ಮಾಡಿರೋದು. ಬೆಳೆಯುತ್ತಾ ಇದನಲ್ಲ. ಬೇಕಂತಾನೇ ತುಳಿಯೋಕೆ ಈ ರೀತಿ ಮಾಡಿದ್ದಾರೆ ಪೊಲೀಸರ ತನಿಖೆಗೆ ಸಂಪೂರ್ಣ ಬೆಂಬಲ ಇದೆ. ಬಿಗ್ ಬಾಸ್ ಹೋಗಿದ್ರು ಅಂತಾ ಖುಷಿ ಇತ್ತು ಈ ರೀತಿ ಆಗಿರೋದು ತುಂಬಾ ದುಃಖ ತಂದಿದೆ ಎಂದಿದ್ದಾರೆ.

Related Video