ಜಯಶ್ರೀ ನಂಬರ್ ಚೆಂಜ್ ಮಾಡಿಕೊಂಡಿದ್ದು ಯಾಕೆ? ಕಾರಣ ಹೇಳಿದ ಭಾವನಾ

ಬಿಗ್ ಬಾಸ್ ಖ್ಯಾತಿ, ನಟಿ-ರೂಪದರ್ಶಿ ಜಯಶ್ರೀ ಆತ್ಮಹತ್ಯೆ/  ಗೆಳತಿ, ಬಿಗ್ ಬಾಸ್ ಸಹಪಾಠಿ ಭಾವನಾ  ಬೆಳಗೆರೆ ಮಾತು/ ಆಕೆ ವೃದ್ಧಾಶ್ರಮಕ್ಕೆ ಹೋಗಿದ್ದೆ ಗೊತ್ತಿಲ್ಲ/ ಇಂಥ ಕೆಲಸ ಮಾಡಿಕೊಂಡಿದ್ದನ್ನು ನಂಬಲು ಸಾಧ್ಯವೇ ಇಲ್ಲ

Share this Video
  • FB
  • Linkdin
  • Whatsapp

ಬೆಂಗಳೂರು(ಜ. 25) ಬಿಗ್ ಬಾಸ್ ಖ್ಯಾತಿ, ನಟಿ-ರೂಪದರ್ಶಿ ಜಯಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್ ಬರೆದಿಟ್ಟು ಜಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಯಶ್ರೀ ಅವರ ಬಗ್ಗೆ ಬಿಗ್ ಬಾಸ್ ನಲ್ಲಿ ಜತೆಯಿದ್ದ ಭಾವನಾ ಬೆಳಗೆರೆ ಮಾತನಾಡಿದ್ದಾರೆ.

ಜಯಶ್ರೀ ಡೆತ್ ನೋಟ್ ನಲ್ಲಿ ಬರೆದಿಟ್ಟಿರುವುದೇನು? 

ನಮ್ಮ ಸೋಶಿಯಲ್ ಮೀಡಿಯಾ ಗ್ರೂಪ್ ನಲ್ಲಿ ಜಯಶ್ರೀ ಸದಾ ಆಕ್ಟೀವ್ ಆಗಿದ್ದಳು. ತಮಾಷೆ ಮಾಡುವುದು, ಬೇರೆಯವರ ಕಾಲೆಳೆಯುವ ಕೆಲಸ ಮಾಡುತ್ತಿದ್ದವಳು ಇಂಥ ತೀರ್ಮಾನ ಮಾಡಿದ್ದಾಳೆ ಎಂದರೆ ಅಚ್ಚರಿಯಾಗುತ್ತಿದೆ ಎಂದಿದ್ದಾರೆ.

Related Video