ಡೆತ್ ನೋಟ್‌ನಲ್ಲಿ ಜಯಶ್ರೀ ಬರೆದಿಟ್ಟಿದ್ದೇನು? ಸಾವಿಗೂ ಮುನ್ನ....

ಬಿಗ್ ಬಾಸ್ ಖ್ಯಾತಿ, ನಟಿ-ರೂಪದರ್ಶಿ ಜಯಶ್ರೀ ಆತ್ಮಹತ್ಯೆ/ ಡೆತ್ ನೋಟ್ ಬರೆದಿಟ್ಟ ನಟಿ/ ಸಾಲ ಪಡೆದುಕೊಂಡಿದ್ದು ಹಣ ಹಿಂದಿರುಗಿಸಲು ಸಂಬಂಧಿಕರಿಗೆ ಮನವಿ/ ಮಾಹಿತಿ ಕೆಲೆ ಹಾಕುತ್ತಿರುವ ಪೊಲೀಸರು

Bigg Boss contestant jayashree ramaiah commits suicide mah

ಬೆಂಗಳೂರು(ಜ. 25) ಬಿಗ್ ಬಾಸ್ ಖ್ಯಾತಿ, ನಟಿ-ರೂಪದರ್ಶಿ ಜಯಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್ ಬರೆದಿಟ್ಟು ಜಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಡೈರಿಯಲ್ಲಿ ಸಾವಿಗೂ ಮುಂಚೆ ಬರೆದಿದ್ದೇನು ಎಂಬುದು ಸಹ ಪ್ರಮುಖ ಅಂಶ.

"

ಸಾಲ‌ ಪಡೆದಿದ್ದವರಿಗೆ ಹಣ ಮರಳಿಸುವಂತೆ ಬರೆದು ನಟಿ ಆತ್ನಹತ್ಯೆ ಮಾಡಿಕೊಂಡಿದ್ದಾರೆ. ಯಾರ್ಯಾರಿಗೆ ಎಷ್ಟು ಹಣ ಕೊಡಬೇಕು ಅಂತಾ ಡೈರಿಯಲ್ಲಿ ನಮೂದಿಸಿದ್ದಾರೆ. ಆ ಹಣ ಹಿಂದಿರುಗಿಸುವಂತೆ ಸಂಬಂಧಿಕರಿಗೆ ಡೆತ್ ನೋಟ್ ಮೂಲಕ ಮನವಿ ಮಾಡಿಕೊಂಡು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ.

ಜಯಶ್ರೀ ಆತ್ಮಹತ್ಯೆಗೆ ಮೂಲ ಕಾರಣ ಏನು? 

ಕಳೆದ ಸೆಪ್ಟೆಂಬರ್ ನಲ್ಲಿ ಜಯಶ್ರೀ ಭೇಟಿ ಮಾಡಿದ್ದೆ. ಅದಾದ ನಂತರ ಅವರು ನನಗೆ ಸಿಕ್ಕಿರಲಿಲ್ಲ ಅವಳಿಗೆ ಡ್ಯಾನ್ಸ್ ಅಂದ್ರೆ ತುಂಬಾ ಇಷ್ಟ. ಡಾನ್ಸ್ ಕ್ಲಾಸ್ ಸೇರಿರೊ ಬಗ್ಗೆ ಸ್ಟೇಟಸ್ ಹಾಕಿಕೊಂಡಿದ್ದರು. ಯಾಕೆ ಈ ರೀತಿ ಮಾಡಿದ್ದಾರೆ ಅಂತ ಗೊತ್ತಿಲ್ಲ. ಕ್ರಿಕೇಟ್ ಲೀಗ್ ನಲ್ಲಿ ಕಡೆ ಬಾರಿ ಭೇಟಿ ಆಗಿದ್ವಿ ಜಯಶ್ರೀ ಅನಾಥಾಶ್ರಮಕ್ಕೆ ಬಂದಿರುವುದು ಗೊತ್ತಿರಲಿಲ್ಲ ಎಂದು ಸಂಧ್ಯಾಕಿರಣ ರಿ ಹ್ಯಾಬಿಟೇಷನ್ ಸೆಂಟರ್ ಬಳಿ ಜಯಶ್ರೀ ಸ್ನೇಹಿತೆ ಅಶ್ವಿತಿ ಹೇಳಿಕೆ ನೀಡಿದ್ದಾರೆ.

"

ಜಯಶ್ರೀ ಪಾರ್ಥಿವ ಶರೀರ ಸದ್ಯ ಸಂಧ್ಯಾಕಿರಣ ರಿ ಹ್ಯಾಬಿಟೇಷನ್ ಸೆಂಟರ್ ಬಳಿಯೇ ಇದ್ದು ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗುತ್ತದೆ. ಘಟನಾ ಸ್ಥಳಕೆ ಮೃತ ಜಯಶ್ರೀ ಚಿಕ್ಕಮ್ಮ ಹಾಗೂ ಸಹೋದರ ಅಜಯ್ ಭೇಟಿ ನೀಡಿದ್ದು  ಪೊಲೀಸರು ಕೆಲ  ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. 

 

 

Latest Videos
Follow Us:
Download App:
  • android
  • ios