Asianet Suvarna News Asianet Suvarna News

'ವಿಡಿಯೋದಲ್ಲಿರೋದು ನಾನೇ, ಪ್ರಾಜೆಕ್ಟ್ ವರ್ಕ್‌ಗೆ ಬಂದಿದ್ಲು' ಒಪ್ಪಿಕೊಂಡ ಜಾರಕಿಹೊಳಿ

* ಮಾಜಿ ಸಚಿವರ ಸಿಡಿ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್
* ಸಿಡಿಯಲ್ಲಿ ಇರುವುದು ನಾನೇ ಎಂದು ಒಪ್ಪಿಕೊಂಡ ಜಾರಕಿಹೊಳಿ
* ಪ್ರಾಜೆಕ್ಟ್ ವರ್ಕ್ ಗೆಂದು ನನ್ನ ನಂಬರ್ ಪಡೆದುಕೊಂಡಿದ್ದಳು
* ಅಪಾರ್ಟ್ ಮೆಂಟ್ ಒಂದರಲ್ಲಿ ಭೇಟಿಯಾಗಿದ್ದು ನಿಜ

ಬೆಂಗಳೂರು(ಮೇ 24) ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಿಡಿಯಲ್ಲಿ ಇರುವುದು ನಾನೇ ಎಂದು ರಮೇಶ್ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ ಎಂಬ ವರದಿಗಳು ಬಂದಿವೆ.

ಮಾಜಿ ಸಚಿವರಿಗೆ ವೈದ್ಯಕೀಯ ಪರೀಕ್ಷೆ ನಡೆದಿತ್ತು

ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಸಿಡಿ ಪ್ರಕರಣದ ನಂತರ ರಮೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.  ಸಂತ್ರಸ್ತೆ ಸಹ ವಿಶೇಷ ತನಿಖಾ ತಂಡದ ಮುಂದೆ ಹಾಜರಾಗಿ ಹೇಳಿಕೆ  ನೀಡಿದ್ದರು.